alex Certify ಬ್ರಿಟನ್ ‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಎಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್ ‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಎಷ್ಟು ಗೊತ್ತಾ..?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಕುರಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಎಲ್ಲರಿಗೂ ಗೊತ್ತೇ ಇರುತ್ತದೆ. ಅಬ್ಬಬ್ಬಾ ಅಂದರೆ 50 ಅಥವಾ 60 ಸಾವಿರ ದಾಟಬಹುದು. ಇದೇ ದೊಡ್ಡ ಮೊತ್ತ ಆಗಿರುತ್ತದೆ. ಆದರೆ ಬ್ರಿಟನ್‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಕೇಳಿದರೆ ಒಮ್ಮೆ ಬೆಚ್ಚಿ ಬೀಳೋದು ಗ್ಯಾರಂಟಿ.

ಹೌದು, ಬ್ರಿಟನ್‌ನ ಲಾನಾರ್ಕ್‌ನಲ್ಲಿ ನಡೆದ ಸ್ಕಾಟಿಷ್ ನ್ಯಾಷನಲ್ ಟೆಕ್ಸೆಲ್‌ನ ಹರಾಜು ಪ್ರಕ್ರಿಯೆಯಲ್ಲಿ ಕುರಿಯೊಂದು 3.5 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಒಂದು ಕುರಿ ಈ ಮಟ್ಟಿಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ನಿಜಕ್ಕೂ ಆಶ್ಚರ್ಯವೇ ಸರಿ.

ಇನ್ನು ಈ ಕುರಿಯ ಹೆಸರು ಡಬಲ್ ಡೈಮಂಡ್ ಅಂತೆ. ಹೆಸರಿಗೆ ತಕ್ಕಂತೆ ಕೋಟಿಗಟ್ಟಲೆ ಬೆಲೆ ಬಾಳಿದೆ ಈ ಕುರಿ. ಜಗತ್ತಿನ ದುಬಾರಿ ಕುರಿ ಎಂದು ಹೆಸರು ಪಡೆದಿದೆ ಈ ಕುರಿ. ಒಟ್ನಲ್ಲಿ ಈ ಕುರಿ ಭಾರೀ ಮೊತ್ತಕ್ಕೆ ಸೇಲ್ ಆಗಿರುವುದು ಮಾಲೀಕರಿಗೆ ಖುಷಿ ನೀಡಿರುವುದಂತೂ ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...