alex Certify ಜೈಲಿನ ಊಟ ನಿರಾಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೆಂಬಲಿಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನ ಊಟ ನಿರಾಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೆಂಬಲಿಗ..!

ಕಳೆದ ಬುಧವಾರ ಅಮೆರಿಕ ಕ್ಯಾಪಿಟಲ್​​ನಲ್ಲಿ ಡೊನಾಲ್ಡ್ ಟ್ರಂಪ್​ ಬೆಂಬಲಿಗರು  ಹಿಂಸಾಚಾರ ನಡೆಸುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಕೊಂಬುಗಳನ್ನುಳ್ಳ ಟೋಪಿ ಹಾಕಿದ್ದ ವ್ಯಕ್ತಿ ಎದ್ದು ಕಂಡಿದ್ದ.

ಸಾಮಾಜಿಕ ಜಾಲತಾಣಗಳಲ್ಲೂ ಈತನ ಫೋಟೋಸ್​ ವೈರಲ್​ ಆಗಿತ್ತು.

ವೈರಲ್​ ಆದ ಫೋಟೋಗಳಲ್ಲಿ ಶರ್ಟ್​ ಧರಿಸದ ವ್ಯಕ್ತಿ ತಲೆಗೆ ಕೊಂಬುಗಳನ್ನ ಹೊಂದಿರುವ ಟೋಪಿಗಳನ್ನ ಧರಿಸಿರೋದು ಹಾಗೂ ಮುಖಕ್ಕೆ ನೀಲಿ, ಬಿಳಿ ಹಾಗೂ ಕೆಂಪು ಬಣ್ಣಗಳನ್ನ ಬಳಿದುಕೊಂಡಿದ್ದು ಕಂಡು ಬಂದಿತ್ತು. ಈ ವ್ಯಕ್ತಿಯನ್ನ ಅಮೆರಿಕ ಮಾಧ್ಯಮಗಳು ಜೆಕ್​ ಎಂಜೆಲಿ ಎಂದು ಗುರುತಿಸಿವೆ. ವರದಿಗಳ ಪ್ರಕಾರ ಏಂಜೆಲಿ ಕಳೆದೊಂದು ವರ್ಷಗಳಿಂದ ಬಲಪಂಥೀಯರ ರ್ಯಾಲಿಗಳಲ್ಲಿ ಕಾಣಿಸಿಕೊಳ್ತಿದ್ದಾನೆ ಎನ್ನಲಾಗಿದೆ.

ಅಮೆರಿಕ ಕ್ಯಾಪಿಟಲ್​ನಲ್ಲಿ ಹಿಂಸಾತ್ಮಕ ಪ್ರವೇಶ ಹಾಗೂ ಅಸಂವಿಧಾನಿಕ ನಡವಳಿಕೆ ಹಲವಾರು ಆರೋಪಗಳಡಿಯಲ್ಲಿ ಜೆಕ್ ಎಂಜೆಲಿ ಅಲಿಯಾಸ್​ ಜಾಕೊಬ್​ ಚಾನ್ಸ್ಲೆ ಸದ್ಯ ಜೈಲಿನಲ್ಲಿದ್ದಾನೆ. ಈ ಬಗ್ಗೆ ಈತನ ತಾಯಿ ಪ್ರತಿಕ್ರಿಯೆ ನೀಡಿದ್ದು , ನನ್ನ ಮಗ ಶುಕ್ರವಾರದಿಂದ ಏನನ್ನೂ ತಿಂದಿಲ್ಲ. ಆತನಿಗೆ ತಿನ್ನಲು ಆರ್ಗಾನಿಕ್​ ಆಹಾರ ಬೇಕು. ಸಾವಯವ ಆಹಾರ ಸೇವಿಸದಿದ್ದಲ್ಲಿ ನನ್ನ ಮಗ ಅನಾರೋಗ್ಯಕ್ಕೀಡಾಗುತ್ತಾನೆ ಎಂದು ಹೇಳಿದ್ದಾಳೆ.

ಈ ವಿಚಾರವನ್ನ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ಟ್ವೀಟಿಗರು ಈತನಿಗೆ ಜೈಲಿನಲ್ಲೂ ಮೆನು ಪ್ರಕಾರವೇ ತಿನ್ನೋಕೆ ಬೇಕಾ ಎಂದು ಪ್ರಶ್ನೆ ಮಾಡ್ತಿದ್ದಾರೆ.

— Melissa Blasius (@MelissaBlasius) January 11, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...