alex Certify ಕೊರೊನಾ ಲಕ್ಷಣವಿಲ್ಲದೆ ಅಚಾನಕ್ ಸಾಯ್ತಿದ್ದಾರೆ 30-49 ವರ್ಷದ ಜನರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಕ್ಷಣವಿಲ್ಲದೆ ಅಚಾನಕ್ ಸಾಯ್ತಿದ್ದಾರೆ 30-49 ವರ್ಷದ ಜನರು…!

ಅಮೆರಿಕಾದಲ್ಲಿ ಕೊರೊನಾ ದೊಡ್ಡ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಲಕ್ಷಣ ಬದಲಾಗ್ತಿರುವುದು ಮತ್ತಷ್ಟು ತಲೆನೋವು ತಂದಿದೆ. ಅಮೆರಿಕಾ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದಲ್ಲಿ 30ರಿಂದ 49 ವರ್ಷದ ಜನರು ಅಚಾನಕ್ ಸಾವನ್ನಪ್ಪುತ್ತಿದ್ದಾರೆ.

ಇದ್ರಲ್ಲಿ ಅನೇಕರಿಗೆ ಕೊರೊನಾದ ಯಾವುದೇ ಲಕ್ಷಣವಿಲ್ಲವಂತೆ. ಏಕಾಏಕಿ ಪಾರ್ಶ್ಚವಾಯು ಕಾಣಿಸಿಕೊಳ್ತಿದ್ದು, ಅವ್ರು ಸಾವನ್ನಪ್ಪುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ. ಲಾಕ್ ಡೌನ್ ಕಾರಣ ಮನೆಯಲ್ಲಿರುವ ಜನರಿಗೂ ಇದು ಕಾಣಿಸಿಕೊಳ್ತಿದೆ. ಈ ಹಿಂದೆ ಯಾವುದೇ ರೋಗಕ್ಕೆ ತುತ್ತಾಗದ ಆರೋಗ್ಯ ವ್ಯಕ್ತಿಗೂ ಈ ಸಮಸ್ಯೆ ಕಾಡುತ್ತಿರುವುದು ದೊಡ್ಡ ಆತಂಕ ಸೃಷ್ಟಿಸಿದೆ.

ಯುಎಸ್ ನ ಅನೇಕ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ತನಿಖೆಯ ಸಮಯದಲ್ಲಿ ಪಾರ್ಶ್ವವಾಯುವಿಗೆ ಬಲಿಯಾದ ಅನೇಕ ಜನರು ಕರೋನಾ ಪಾಸಿಟಿವ್ ಆಗಿದ್ದರು ಎಂಬುದು ಕಂಡು ಬಂದಿದೆ. ಆದ್ರೆ ಪಾರ್ಶ್ವವಾಯುಗೆ ತುತ್ತಾಗುವ ಮೊದಲು ನಡೆದ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಕಂಡುಬಂದಿರಲಿಲ್ಲವಂತೆ.

ಕೊರೊನಾ ವೈರಸ್ ಲಕ್ಷಣಗಳು ಬದಲಾಗ್ತಿವೆ. ಕಾಲಿನ ಬೆರಳಿನ ಮೇಲೆ ಕಾಣಿಸಿಕೊಳ್ತಿರುವ ಕೆಂಪು ಗುಳ್ಳೆಗಳು ಕೂಡ ಕೊರೊನಾ ಲಕ್ಷಣವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...