alex Certify ಕೈಕೊಟ್ಟ ಪ್ರಿಯತಮ..! ಮಾಜಿ ಲವರ್‌ ಗೆ ಪ್ರಿಯತಮೆ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಕೊಟ್ಟ ಪ್ರಿಯತಮ..! ಮಾಜಿ ಲವರ್‌ ಗೆ ಪ್ರಿಯತಮೆ ಮಾಡಿದ್ದೇನು ಗೊತ್ತಾ..?

ಪ್ರೀತಿಯಲ್ಲಿ ಅನೇಕ ಮಂದಿ ಸೋಲುವುದು ಸಾಮಾನ್ಯ. ಪ್ರೀತಿಯಲ್ಲಿ ಸೋತ ಅದಷ್ಟೋ ಜೀವಗಳು ಸಾವಿನ ದಾರಿ ಹಿಡಿದು ಜೀವನ ಹಾಳು ಮಾಡಿಕೊಳ್ಳುವುದು ಕಾಮನ್ ಆಗಿಬಿಟ್ಟಿದೆ. ಆದರೆ ಪ್ರಪಂಚದಲ್ಲಿ ಪ್ರೀತಿಸಿದ ಜೋಡಿಗಳು ಮದುವೆಯಾಗಿ ಸುಖ ಸಂಸಾರ ಕೂಡ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಹುಡುಗಿ ಕೈ ಕೊಟ್ಟಳು ಅಂತಾ ಕುಡಿತದ ದಾಸರಾಗುವ ಹುಡುಗರು, ಹುಡುಗ ಕೈ ಕೊಟ್ಟ ಎಂಬ ಕಾರಣಕ್ಕೆ ಚಿಂತೆ ಮಾಡುತ್ತಲೇ ಜೀವನ ಕಳೆಯುವ ಹುಡುಗಿಯರೂ ಇದ್ದಾರೆ.

ಆದರೆ ಇಲ್ಲೊಂದು ಜೋಡಿ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯದ ಜೊತೆಗೆ ನಗುವುದು ಗ್ಯಾರಂಟಿ. ತಾನು ಪ್ರೀತಿಸಿದ ಹುಡುಗ ಕೈ ಕೊಟ್ಟ ಎಂಬ ಕಾರಣಕ್ಕೆ ಹುಡುಗಿಯೊಬ್ಬಳು ತನ್ನ ಮಾಜಿ ಲವರ್‌ಗೆ ಸುಮಾರು ಟನ್ ಗಟ್ಟಲೆ ಈರುಳ್ಳಿ ನೀಡಿದ್ದಾಳೆ. ಡೆಲವರಿ ಬಾಯ್ ಮೂಲಕ ಮಾಜಿ ಲವರ್ ಮನೆಗೆ ಈರುಳ್ಳಿಯನ್ನು ಕಳುಹಿಸಿದ್ದಾಳೆ.

ಈ ಘಟನೆ ನಡೆದಿರೋದು ಬೀಜಿಂಗ್‌ನಲ್ಲಿ. ಝಾವೋ ಎಂಬ ಯುವತಿ ವರ್ಷದಿಂದ ಪ್ರೀತಿ ಮಾಡುತ್ತಿದ್ದ ತನ್ನ ಲವರ್ ಕೈ ಕೊಟ್ಟ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಳೆ. ಇದಕ್ಕೆ ಕಾರಣ ಏನೆಂದರೆ, ತಾನು ಎಷ್ಟು ಕಣ್ಣೀರು ಹಾಕಿದ್ದೀನೋ ಅದೇ ರೀತಿ ಈರುಳ್ಳಿಯಿಂದ ಆತನೂ ಕಣ್ಣೀರು ಹಾಕಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...