alex Certify ಅರೆ ಬೆತ್ತಲಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರೆ ಬೆತ್ತಲಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್..!

ಬೇಸಿಗೆ ಕಾಲ ಬಂದರೆ ಸಾಕು ಜನ ಫ್ಯಾನ್, ಎಸಿ, ತೆಳುವಾದ ಬಟ್ಟೆಗಳ ಮೊರೆ ಹೋಗುವುದು ಕಾಮನ್. ಇನ್ನೊಂದಿಷ್ಟು ಮಂದಿ ಸೆಕೆ ಕಾಲಕ್ಕೆ ಅಂತಾನೆ ಬರುವ ಬಟ್ಟೆಗಳನ್ನು ಧರಿಸುತ್ತಾರೆ. ಅದು ಮನೆಯಲ್ಲಿದ್ದಾಗ ಮಾತ್ರ. ಆದರೆ ಇಲ್ಲೊಬ್ಬ ನರ್ಸ್ ಸೆಕೆ ಅಂತ ವಿಭಿನ್ನ ಬಟ್ಟೆಯನ್ನು ಧರಿಸಿದ್ದಾರೆ. ಇವರ ಈ ಕೆಲಸ ನೋಡಿದ ರೋಗಿಗಳು ಹಾಗೂ ನೋಡುಗರು ದಂಗಾಗಿದ್ದಾರೆ.

ಹೌದು, ದಕ್ಷಿಣ ಮೆಕ್ಸಿಕೋ ಭಾಗದಲ್ಲಿರುವ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ಸೆಕೆ ಅಂತಾ ಪಿಪಿಇ ಕಿಟ್ ಧರಿಸಿದ್ದಾರೆ. ಆದರೆ ಒಳಭಾಗದಲ್ಲಿ ಆಕೆ ಒಳ ಉಡುಪು ಬಿಟ್ಟು ಬೇರೆ ಏನನ್ನೂ ಧರಿಸಿಯೇ ಇಲ್ಲ. ಹಾಗೆ ಪಿಪಿಇ ಕಿಟ್ ಧರಿಸಿ ಕೊರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಇದನ್ನು ನೋಡಿದ ಅಲ್ಲಿನ ರೋಗಿಗಳು ಒಮ್ಮೆ ಶಾಕ್ ಆಗಿರುವುದಂತೂ ಸತ್ಯ.

ಇದನ್ನು ನೋಡಿದ ಹಲವು ಮಂದಿ ಈ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಈ ನರ್ಸ್ ವಿರುದ್ಧ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ನರ್ಸ್ ಗೆ ಛೀಮಾರಿ ಹಾಕಿದೆ. ಇದಕ್ಕೆ ಉತ್ತರಿಸಿರುವ ನರ್ಸ್ ಆಸ್ಪತ್ರೆಯಲ್ಲಿ ಎಸಿ ಇಲ್ಲ. ಪಿಪಿಇ ಕಿಟ್ ಹಾಕಿದ್ರೆ ಇನ್ನೂ ಸೆಕೆ ಅನ್ನಿಸುತ್ತೆ ಅಂತಾ ಹೀಗೆ ಮಾಡಿದ್ದೇನೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...