alex Certify ʼಸೆಕ್ಸ್ʼ​ ಮಾಡುವಾಗ ಶಬ್ದ ಮಾಡಬೇಡಿ ಎಂದು ಪತ್ರ ಬರೆದ ನೆರೆಮನೆಯಾತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೆಕ್ಸ್ʼ​ ಮಾಡುವಾಗ ಶಬ್ದ ಮಾಡಬೇಡಿ ಎಂದು ಪತ್ರ ಬರೆದ ನೆರೆಮನೆಯಾತ…!

ಪತ್ರ ಬರೆಯೋದು ಒಂದು ಕಲೆ. ಮತ್ತೊಬ್ಬರ ಮನಸ್ಸಿಗೆ ನೋವಾಗದಂತ ವಿಷಯವನ್ನ ತಲುಪಿಸೋದು ಎಲ್ಲರಿಂದಲೂ ಆಗುವ ಕೆಲಸವಲ್ಲ. ಅಂದಹಾಗೆ ಈ ವಿಚಾರದ ಬಗ್ಗೆ ಇಲ್ಲಿ ಹೇಳೋಕೆ ಕಾರಣವೂ ಇದೆ. ಅಪಾರ್ಟ್​ಮೆಂಟ್​ ನಿವಾಸಿಯಾಗಿದ್ದ ವ್ಯಕ್ತಿಯೊಬ್ಬರಿಗೆ ನೆರೆಮನೆಯವರು ಪತ್ರವನ್ನ ಕಳುಹಿಸಿದ್ದು, ಅದರಲ್ಲಿದ್ದ ವಿಷಯವನ್ನ ಕಂಡು ಶಾಕ್​ ಆಗಿದ್ದಾರೆ.

ಸ್ಟೀಫನ್​ ಕನ್ನಿಂಗ್​ಹ್ಯಾಮ್​ ಎಂಬವರಿಗೆ ಬಂದ ಪತ್ರ ಇದಾಗಿದ್ದು ಈ ಪತ್ರವನ್ನ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಈ ಪತ್ರದಲ್ಲಿ ನೆರೆಮನೆಯ ವ್ಯಕ್ತಿ ಅತ್ಯಂತ ಸೌಜನ್ಯದಿಂದ ತಮ್ಮ ದೂರನ್ನ ತಿಳಿಸಿದ್ದಾರೆ : ಆತ್ಮೀಯ ನೆರೆಮನೆಯವರೆ, ಈ ಕಟ್ಟಡದ ಗೋಡೆಗಳು ಸಪೂರಾಗಿದ್ದು ಶಬ್ದವು ಒಂದು ಮನೆಯಿಂದ ಇನ್ನೊಂದು ಮನೆಗೆ ಕೇಳಿಸುತ್ತಿದೆ ಎಂಬುದನ್ನ ನೆನಪು ಮಾಡಲು ಈ ಪತ್ರವನ್ನ ಬರೆಯುತ್ತಿದ್ದೇನೆ.

ನೆರೆ ಮನೆಯವರನ್ನ ಗೌರವದಿಂದ ಕಾಣಬೇಕು ಎಂಬ ಮಾತನ್ನ ನೀವು ಒಪ್ಪುತ್ತೀರಿ ಎಂದು ನಾನು ನಂಬಿದ್ದೇನೆ. ನಿಮ್ಮ ಖಾಸಗಿ ವಿಚಾರಗಳನ್ನ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸೋದಿಲ್ಲ.

ಹೀಗಾಗಿ ರಾತ್ರಿ ವೇಳೆ ದಯವಾಡಿ ಸದ್ದನ್ನ ಕಡಿಮೆ ಮಾಡಿ. ನಿಮಗೂ ನೆರೆಮನೆಯವರಿದ್ದು ಅವರಿಗೆ ನೀವು ಮಾಡುವ ಶಬ್ದ ಕೇಳಿಸುತ್ತದೆ ಎಂಬುದನ್ನ ದಯಮಾಡಿ ನಿಮ್ಮ ತಲೆಯಲ್ಲಿಡಿ. ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಈ ಪತ್ರದಲ್ಲಿ ಬರೆಯಲಾಗಿದೆ.

ನಾನು ನಿನ್ನೆ ಬೆಳಗ್ಗೆ ಎದ್ದು ಬಾಗಿಲ ಬಳಿ ಹೋದಾಗ ಈ ಪತ್ರ ಸಿಕ್ಕಿದೆ. ನಾನು ನಿತ್ಯ ಬೆಳಗ್ಗೆ 8.30ರ ಸುಮಾರಿಗೆ ಏಳುತ್ತೇನೆ. ಇದರ ಬಗ್ಗೆ ಗೊತ್ತಿದ್ದೇ ಅವರು ಮೊದಲು ಪತ್ರವನ್ನ ಇಟ್ಟು ಹೋಗಿದ್ದಿರಬಹುದು. ಈ ಪತ್ರವನ್ನ ಓದುತ್ತಾ ನನಗೆ ನಾಚಿಕೆ ಎನಿಸಲು ಶುರುವಾಗಿತ್ತು ಎಂದು ಹೇಳಿದ್ದಾರೆ.

ಈ ಪತ್ರವನ್ನ ಟ್ವಿಟರ್​ನಲ್ಲಿ ಶೇರ್​​ ಮಾಡಿರುವ ಸ್ಟೀಫನ್​, ನನ್ನ ನೆರೆಮನೆಯವರು ನನಗೆ ಶಬ್ದ ಮಾಡದೇ ಸೆಕ್ಸ್ ಮಾಡುವಂತೆ ಪತ್ರದ ಮೂಲಕ ತಿಳಿಸಿದ್ದಾರೆ. ನನಗೆ ಇದರಿಂದ ಮುಜುಗರವಾಯಿತು ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಸಾಕಷ್ಟು ಕಮೆಂಟ್​ಗಳನ್ನ ಸಂಪಾದಿಸಿದೆ. ಓರ್ವ ಟ್ವೀಟಿಗ ನಿನ್ನ ನೆರೆಮನೆಯವರಿಗೆ ಇಯರ್​ಪ್ಲಗ್​ಗಳನ್ನ ಕೊಡಿಸು . ಬಳಿಕ ನಿನ್ನ ಜೀವನವನ್ನ ನೀನು ಎಂಜಾಯ್​ ಮಾಡು ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...