alex Certify ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್

ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಹಾಗೂ ಕತ್ರಿನಾ ಕೈಫ್ ಕುಣಿದಿರುವ ಹಾಡುಗಳನ್ನು ನೋಡಲು ಈಗಲೂ ಇಷ್ಟಪಡುವ ಬಹಳಷ್ಟು ಮಂದಿ ಇದ್ದಾರೆ.

ಈ ಚಿತ್ರ‍ದಲ್ಲಿ ಭಾರೀ ಹಿಟ್ ಆದ ಹಾಡುಗಳಲ್ಲಿ ಒಂದು ’ನಜಾ’. ಈ ಹಾಡಿಗೆ ಅಭಿಮಾನಿಗಳಿಬ್ಬರು ಸ್ಟೆಪ್ ಹಾಕಿರುವ ವಿಡಿಯೋವೊಂದು ವೈರಲ್‌ ಆಗಿದೆ. ನಜಾ ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಹಾಗೂ ಕತ್ರಿನಾ ಕೈಫ್‌ರಂತೆಯೇ ಕಾಸ್ಟ್ಯೂಮ್‌ ಧರಿಸಿರುವ ಈ ಪುರುಷ ಹಾಗೂ ಮಹಿಳೆ ಇಬ್ಬರೂ ಅವರಂತೆಯೇ ಸ್ಟೆಪ್ ಹಾಕಿದ್ದಾರೆ.

ಜೀವನ ನಿರ್ವಹಣೆಗಾಗಿ ಮದ್ಯದಂಗಡಿ ತೆರೆದ ಹಾಸ್ಯನಟ….!

ಇಂಡೋನೇಷ್ಯಾದ ಯೂಟ್ಯೂಬರ್‌ ಹಾಗೂ ಡ್ಯಾನ್ಸರ್‌ ವಿನಾ ಫಾನ್ ಈ ವಿಡಿಯೋವನ್ನು ಮೊದಲ ಬಾರಿಗೆ ಶೇರ್‌ ಮಾಡಿದ್ದರು. ಬಳಿಕ ಈ ವಿಡಿಯೋ ಅಕ್ಷಯ್ ಕುಮಾರ್‌ ಗಮನ ಸೆಳೆದಿದ್ದು, “ಈ ಮರುಸೃಷ್ಟಿ ನನಗೆ ಇಷ್ಟವಾಗಿದೆ, ಅದ್ಭುತ ಪ್ರಯತ್ನ,” ಎಂದು ಖಿಲಾಡಿ ನಟ ರೀಟ್ವಿಟ್ ಮಾಡಿದ್ದಾರೆ.

ವಿಡಿಯೋದಲ್ಲಿರುವ ಮಹಿಳೆ ನಜಾ ಹಾಡಿನ ಡ್ಯಾನ್ಸ್‌ನಲ್ಲಿ ಕತ್ರಿನಾ ಧರಿಸಿರುವ ಬಟ್ಟೆಯಂತದ್ದನ್ನೇ ಹಾಕಿದ್ದು, ಪುರುಷ ಅಕ್ಷಯ್ ಕುಮಾರ್‌ರ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ.

— Akshay Kumar (@akshaykumar) December 1, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...