alex Certify ಮೊಬೈಲ್ ಬಳಕೆದಾರರ ಸಂಖ್ಯೆ ಕುರಿತು ಅಚ್ಚರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಕೆದಾರರ ಸಂಖ್ಯೆ ಕುರಿತು ಅಚ್ಚರಿ ಮಾಹಿತಿ ಬಹಿರಂಗ

ಡಿಸೆಂಬರ್‌ 2021ರಲ್ಲಿ ದೇಶದ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ 1.28 ಕೋಟಿಯಷ್ಟು ಇಳಿಕೆ ಕಂಡು ಬಂದಿದ್ದು, ರಿಲಾಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಚಂದಾದಾರರನ್ನು ಕಳೆದುಕೊಳ್ಳುತ್ತಿವೆ ಎಂದು ಟ್ರಾಯ್ ದತ್ತಾಂಶ ತಿಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ 1.29 ಕೋಟಿಯಷ್ಟು ವೈರ್‌ಲೆಸ್ ಚಂದಾದಾರರನ್ನು ಕಳೆದುಕೊಂಡಿರುವ ರಿಲಾಯನ್ಸ್ ಜಿಯೋ ಡಿಸೆಂಬರ್‌ 2021ರ ವೇಳೆಗೆ 41.57 ಕೋಟಿ ಗ್ರಾಹಕರನ್ನು ಹೊಂದಿದೆ. ಕಳೆದ ತಿಂಗಳು 16.14 ಲಕ್ಷ ಚಂದಾದಾರನ್ನು ಕಳೆದುಕೊಂಡಿರುವ ವೊಡಾಫೋನ್ ಐಡಿಯಾ, ವರ್ಷಾಂತ್ಯಕ್ಕೆ 26.55 ಕೋಟಿ ಚಂದಾದಾರರನ್ನು ಹೊಂದಿತ್ತು.

ಬೇಸಿಗೆಯಲ್ಲಿ ಎಷ್ಟು ‘ನೀರು’ ಕುಡಿಯಬೇಕು……?

ಇದೇ ವೇಳೆ, 4.75 ಲಕ್ಷ ಚಂದಾದಾರನ್ನು ಹೆಚ್ಚುವರಿಯಾಗಿ ಪಡೆದ ಏರ್‌ಟೆಲ್, ತನ್ನ ಬಳಕೆದಾರರ ಮೂಲವನ್ನು 35.57 ಕೋಟಿಗೆ ಹೆಚ್ಚಿಸಿಕೊಂಡಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಕ ಪ್ರಾಧಿಕಾರ (ಟ್ರಾಯ್) ಚಂದಾದಾರರ ದತ್ತಾಂಶ ಪಟ್ಟಿ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...