alex Certify BIG NEWS: ದೇಶದ ಮೊದಲ ಸೋಂಕಿತೆಗೆ ಈಗ ಮತ್ತೆ ಕೊರೊನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಮೊದಲ ಸೋಂಕಿತೆಗೆ ಈಗ ಮತ್ತೆ ಕೊರೊನಾ…!

ಭಾರತದ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್​ ವಿದ್ಯಾರ್ಥಿನಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ ಎಂದು ಕೇರಳದ ತ್ರಿಶೂರ್​​ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆಕೆ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ.

ಆಕೆಯ ಆರ್​ ಟಿ ಪಿ ಸಿ ಆರ್​ ವರದಿ ಪಾಸಿಟಿವ್​ ಬಂದಿದ್ದರೆ ಆಂಟಿಜನ್​ ವರದಿಯಲ್ಲಿ ನೆಗೆಟಿವ್​ ಎಂದು ಬಂದಿದೆ. ಈಕೆ ಲಕ್ಷಣ ರಹಿತ ಕೊರೊನಾ ಸೋಂಕನ್ನ ಹೊಂದಿದ್ದಾಳೆ ಎಂದು ತ್ರಿಶೂರ್​ನ ಡಿಎಂಓ ಡಾ. ಕೆ. ಜೆ. ರೀನಾ ಮಾಹಿತಿ ನೀಡಿದ್ರು.

ವಿದ್ಯಾಭ್ಯಾಸಕ್ಕಾಗಿ ಈಕೆ ದೆಹಲಿಗೆ ಪ್ರಯಾಣ ಬೆಳೆಸಬೇಕಾದ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಳು. ಆದರೆ ಆರ್​ ಟಿ ಪಿ ಸಿ ಆರ್​ ಪರೀಕ್ಷೆಯಲ್ಲಿ ಈಕೆಗೆ ಸೋಂಕಿರೋದು ದೃಢವಾಗಿದೆ. ಪ್ರಸ್ತುತ ಸೋಂಕಿತ ವಿದ್ಯಾರ್ಥಿನಿ ಮನೆಯಲ್ಲೇ ಇದ್ದು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ವರ್ಷ ಜನವರಿ 30ರಂದು ವುಹಾನ್​​ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಮೆಡಿಕಲ್​ ವಿದ್ಯಾರ್ಥಿನಿಯಾಗಿದ್ದ ಈಕೆ ಕೊರೊನಾ ಸೋಂಕಿಗೆ ಒಳಗಾಗಿದ್ದಳು. ಸೆಮಿಸ್ಟರ್​​ ರಜೆಯ ಹಿನ್ನೆಲೆ ಭಾರತಕ್ಕೆ ಮರಳಿದ್ದ ಈಕೆ ದೇಶದ ಮೊದಲ ಕೊರೊನಾ ಸೋಂಕಿತೆ ಎನಿಸಿಕೊಂಡಿದ್ದಳು.

ತ್ರಿಶೂರ್​ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ವಾರಗಟ್ಟಲೇ ಚಿಕಿತ್ಸೆ ಪಡೆದ ಬಳಿಕ ಈಕೆ ಕೊರೊನಾ ಸೋಂಕಿನಿಂದ ಗುಣಮುಖಳಾಗಿದ್ದಳು. ಕಳೆದ ವರ್ಷ ಫೆಬ್ರವರಿ 20ರಂದು ಈಕೆಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...