alex Certify ಬರೋಬ್ಬರಿ 33 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿ ಮಾಡಿದ ಮಾರುತಿ ಕಾರ್ ಡೀಲರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 33 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿ ಮಾಡಿದ ಮಾರುತಿ ಕಾರ್ ಡೀಲರ್‌

ಮಾರುತಿ ಕಾರಿಗೆ ದೇಶದಲ್ಲೇ ಅತಿ ದೊಡ್ಡ ಡೀಲರ್‌ ಎಂಬ ಹೆಗ್ಗಳಿಕೆ ಹೊಂದಿರುವ ವರುಣ್ ಮೋಟಾರ್ಸ್‌ನ ವಳ್ಳೂರುಪಳ್ಳಿ ವರುಣ್ ದೇವ್‌ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ಪ್ರದೇಶದಲ್ಲಿ ಬರೋಬ್ಬರಿ 33 ಕೋಟಿ ರೂ. ಮೌಲ್ಯದ ಬಂಗಲೆ ಒಂದನ್ನು ಖರೀದಿಸಿದ್ದಾರೆ.

1,200 ಚದರ ಮೀಟರ್‌ಗಳಷ್ಟು ವಿಸ್ತಾರವಿರುವ ಈ ಆಸ್ತಿಯಲ್ಲಿ 1,780 ಚದರಡಿಗಳಷ್ಟು ಪ್ರದೇಶದಲ್ಲಿ ಮನೆ ಇದೆ. ಅಕ್ಟೋಬರ್‌ 1, 2021ರಂದು ಮಾರಾಟದ ದಾಖಲೆ ನೋಂದಣಿ ಮಾಡಲಾಗಿದೆ. ಹೈದರಾಬಾದ್‌ನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಜುಬಿಲಿ ಹಿಲ್ಸ್ ಕಳೆದ ಐದು ವರ್ಷಗಳಲ್ಲಿ 10 ಕೋಟಿ ರೂ.ಗಳನ್ನು ಮೀರಿದ 120 ರಷ್ಟು ಆಸ್ತಿಗಳ ಮಾರಾಟ ಕಂಡಿದೆ.

ಶಾಲೆಗಳಲ್ಲಿ ಶನಿವಾರವೂ ಪೂರ್ಣ ತರಗತಿ: ಪಠ್ಯ ಕಡಿತವಿಲ್ಲ, ಶಿಕ್ಷಕರು ಒಪ್ಪಿದ್ರೆ ಶನಿವಾರ ಕ್ಲಾಸ್; ಸಚಿವ ನಾಗೇಶ್ ಮಾಹಿತಿ

ನಗರದ ಪ್ರತಿಷ್ಠಿತ ವರ್ಗದ ಬಹಳಷ್ಟು ಮಂದಿ ವಾಸಿಸುವ ಈ ಪ್ರದೇಶದಲ್ಲಿ ಬೆಲೆಗಳು ಬಹಳ ದುಬಾರಿ ಇದ್ದು, ಕೋವಿಡ್ ಸಾಂಕ್ರಮಿಕದ ನಡುವೆಯೂ ಆಸ್ತಿಗಳ ಬೆಲೆಯಲ್ಲಿ ಏರಿಕೆ ಮುಂದುವರೆದಿದೆ. ಹೊಸ ಬಂಗಲೆ ಖರೀದಿ ಬಗ್ಗೆ ವರುಣ್ ದೇವ್‌ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...