alex Certify ತನಗೆ ಕಪಾಳಮೋಕ್ಷ ಮಾಡಲು ಯುವತಿ ನೇಮಿಸಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನಗೆ ಕಪಾಳಮೋಕ್ಷ ಮಾಡಲು ಯುವತಿ ನೇಮಿಸಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಉದ್ಯಮಿ

ಈ ತಿಂಗಳ ಆರಂಭದಲ್ಲಿ, ಭಾರತೀಯ ಮೂಲದ ಅಮೆರಿಕನ್ ಉದ್ಯಮಿಯೊಬ್ಬರು ಫೇಸ್‌ಬುಕ್ ಬಳಸುವಾಗಲೆಲ್ಲಾ ತನಗೆ ಕಪಾಳಮೋಕ್ಷ ಮಾಡಲು ಯುವತಿಯನ್ನು ನೇಮಿಸಿಕೊಂಡಿದ್ದ ಸುದ್ದಿ ಭಾರಿ ವೈರಲ್ ಆಗಿತ್ತು. ಇದೀಗ ಅವರು ಇದರ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.

ಮನೀಶ್ ಸೇಥಿ ಎಂಬ ಉದ್ಯಮಿಯೊಬ್ಬರು ಫೇಸ್ಬುಕ್ ನಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಿದ್ರೆ ತನಗೆ ಏಟು ಕೊಡಲು ಯುವತಿಯನ್ನು ನೇಮಿಸಿದ್ದಾರೆ. ಇದಕ್ಕೆ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉತ್ಪಾದಕತೆಯನ್ನು ಸುಧಾರಿಸಲು ಅವರ ವಿಶಿಷ್ಟ ತಂತ್ರವನ್ನು ಶ್ಲಾಘಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮನೀಶ್, ಸಾಮಾಜಿಕ ಮಾಧ್ಯಮದಲ್ಲಿ ಸುಮ್ಮನೆ ಕಾಲಹರಣ ಮಾಡುವುದನ್ನು ಸ್ವತಃ ಅವರು ಕಂಡುಕೊಂಡಿದ್ದಾರೆ. ರೆಸ್ಕ್ಯೂಟೈಮ್ ಮ್ಯಾನೇಜ್ ಮೆಂಟ್ ಆ್ಯಪ್ ಬಳಸಿ ದಿನದ 19 ಗಂಟೆ ವ್ಯರ್ಥವಾಗುತ್ತಿರುವುದನ್ನು ಕಂಡು ಮನೀಶ್ ಶಾಕ್ ಆಗಿದ್ದಾರೆ. ಇದಕ್ಕಾಗಿ ತಾನು ಫೇಸ್ಬುಕ್ ಗೆ ಹೋದಾಗಲೆಲ್ಲಾ ತನ್ನನ್ನು ಎಚ್ಚರಿಸುವುದಕ್ಕಾಗಿ ಕೆಲಸಕ್ಕೆ ಉದ್ಯೋಗಿಯನ್ನು ನೇಮಿಸಲು ಯೋಚಿಸಿದ್ದಾಗಿ ಅವರು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಸಮಯ ಕಳೆಯದಂತೆ ಕಪಾಳಮೋಕ್ಷ ಮಾಡುವ ವಿಧಾನವನ್ನು ಆಯ್ಕೆ ಮಾಡಲು ಮನೀಶ್‌ಗೆ ಸ್ಫೂರ್ತಿ ಎಲ್ಲಿಂದ ಬಂತು ಅಂತಾ ಕೇಳಿದ್ರೆ, ಇದು ಸ್ಲ್ಯಾಪ್ ಬಾಜಿ ಸಂಸ್ಕೃತಿಯಾಗಿದೆ ಅಂತಾ ಉದ್ಯಮಿ ಬಹಿರಂಗಪಡಿಸಿದ್ದಾರೆ. ಅಂದರೆ ಸೋತವರು ಬಿಗಿಯಾದ ಹೊಡೆತವನ್ನು ಸ್ವೀಕರಿಸುವ ಜೂಜಾಟ. ಇದು ಹೌ ಐ ಮೆಟ್ ಯುವರ್ ಮದರ್ ಕಾರ್ಯಕ್ರಮದಿಂದ ಜನಪ್ರಿಯವಾಯಿತು. ಈ ತಂತ್ರವನ್ನೇ ತನ್ನ ಜೀವನಕ್ಕೆ ಮನೀಷ್ ಅಳವಡಿಸಿಕೊಂಡಿದ್ದಾರೆ.

ಮನೀಶ್ ಅವರ ಕಥೆ ಕೇಳಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಒಬ್ಬ ಬಳಕೆದಾರ,  ತಾನು ದಿನಕ್ಕೆ 10 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮವನ್ನು ಸ್ಕ್ರೋಲಿಂಗ್ ಮಾಡುವ ಕಾಯಿಲೆಯನ್ನು ಹೊಂದಿರುವುದಾಗಿ ಹೇಳಿದ್ದಾನೆ.

ಕೊರೋನ ವೈರಸ್ ಸಾಂಕ್ರಾಮಿಕವು ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಮುಳುಗುವಂತೆ ಮಾಡಿ, ಸಮಯ ವ್ಯರ್ಥ ಮಾಡಿಸುವಂತೆ ಆಗಿದೆ ಹಾಗೂ ಮನೆಯಲ್ಲೇ ಕೆಲಸ ಮಾಡುವುದರಿಂದ ನಮ್ಮಲ್ಲಿ ಬಹಳಷ್ಟು ಜನರು ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ಮನೀಶ್ ಉಲ್ಲೇಖಿಸಿದ್ದಾರೆ.

— Massimo (@Rainmaker1973) November 10, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...