alex Certify ಇಂಗ್ಲೆಂಡ್ ನಲ್ಲಿ ಸೀಮಿತ ಓವರ್ ನ 6 ಪಂದ್ಯ ಆಡಲಿದೆ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್ ನಲ್ಲಿ ಸೀಮಿತ ಓವರ್ ನ 6 ಪಂದ್ಯ ಆಡಲಿದೆ ಭಾರತ

ಟೀಂ ಇಂಡಿಯಾ ಮುಂದಿನ ವರ್ಷ ಮತ್ತೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್ ವಿರುದ್ಧ ಭಾರತ, ಸೀಮಿತ ಓವರ್ ನ 6 ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, ಈ ಬಗ್ಗೆ ಮಾಹಿತಿ ನೀಡಿದೆ.

ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಾಡ್ತಿದೆ. ಸೆಪ್ಟೆಂಬರ್ 5ರಂದು ಕೊನೆಯ ಪಂದ್ಯ ನಡೆಯಲಿದೆ. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಮುಂದಿದೆ.

ಕೊರೊನಾ ಸೋಂಕನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ತಂಡ ಸೀಮಿತ ಓವರ್ ಪಂದ್ಯಗಳ ವೇಳಾಪಟ್ಟಿ ಸಿದ್ಧಪಡಿಸಿದೆ. ಮುಂದಿನ ವರ್ಷ ಜುಲೈ ಒಂದರಿಂದ ಪ್ರವಾಸದ ಪಂದ್ಯ ಶುರುವಾಗಲಿದೆ. ಮೊದಲು ಟಿ-20 ಪಂದ್ಯ ನಡೆಯಲಿದೆ. ಜುಲೈ 3ರಂದು ಎರಡನೇ ಹಾಗೂ ಜುಲೈ 6ರಂದು ಮೂರನೇ ಟಿ-20 ಪಂದ್ಯ ನಡೆಯಲಿದೆ. ಏಕದಿನ ಪಂದ್ಯಗಳು ಜುಲೈ 9ರಿಂದ ಶುರುವಾಗಲಿದೆ. ಜುಲೈ 9ಕ್ಕೆ ಮೊದಲ ಪಂದ್ಯ, ಜುಲೈ 12ರಂದು ಎರಡನೇ ಪಂದ್ಯ ಹಾಗೂ ಜುಲೈ 14ರಂದು ಮೂರನೇ ಪಂದ್ಯ ನಡೆಯಲಿದೆ.

ಇಂಗ್ಲೆಂಡ್ 2022ರಲ್ಲಿ ಮೊದಲು ನ್ಯೂಜಿಲ್ಯಾಂಡ್ ವಿರುದ್ಧ ಸೆಣೆಸಲಿದೆ. ಭಾರತದ ನಂತ್ರ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...