alex Certify BIG NEWS: 164 ಮತಗಳೊಂದಿಗೆ ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಗೊಂಡ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 164 ಮತಗಳೊಂದಿಗೆ ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಗೊಂಡ ಭಾರತ

ವಿಶ್ವಸಂಸ್ಥೆಯ ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಭಾರತವು ಮರು ಆಯ್ಕೆಯಾಗಿದೆ. 164 ಮತಗಳೊಂದಿಗೆ ಮರುಚುನಾವಣೆಯಲ್ಲಿ ಗೆಲುವು ಸಾಧಿಸಿದ ಭಾರತವು 2021-25ರ ಅವಧಿಯವರೆಗೆ ಈ ಸದಸ್ಯತ್ವವನ್ನು ಹೊಂದಿರಲಿದೆ.

ಈ ಮೂಲಕ ಜಪಾನ್​, ಫಿಲಿಫೈನ್ಸ್​, ವಿಯೆಟ್ನಾಂ, ಕುಕ್​​ ದ್ವೀಪ ಹಾಗೂ ಚೀನಾವನ್ನು ಒಳಗೊಂಡ ಏಷ್ಯಾ ಮತ್ತು ಪೆಸಿಫಿಕ್​ ರಾಜ್ಯಗಳ ಆರನೇ ಗುಂಪಿಗೆ ಭಾರತವು ಮರು ಆಯ್ಕೆಯಾದಂತಾಗಿದೆ.

ಭಾರತವು 2021-25ರ ಅವಧಿಗೆ 164 ಮತಗಳೊಂದಿಗೆ ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಯಾಗಿದೆ ಎಂದು ಪ್ಯಾರಿಸ್​ ಮೂಲದ ಯುನೆಸ್ಕೋಗೆ ಭಾರತದ ಶಾಶ್ವತ ನಿಯೋಗ ಟ್ವೀಟ್​ ಮಾಡಿದೆ.

ಯುನೆಸ್ಕೋ ವಿಶ್ವಸಂಸ್ಥೆ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. ವಿಶ್ವ ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್​ ಅಂದಾಜಿಗೆ ಸಂಬಂಧಿಸಿದ ವಿಚಾರಗಳನ್ನು ಯುನೆಸ್ಕೋ ಪರಿಶೀಲನೆ ಮಾಡುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...