alex Certify ಡಿಜಿಟಲ್​ ಕ್ವಾಲಿಟಿ ಲೈಫ್‌ ನಲ್ಲಿ ಭಾರತಕ್ಕೆ 59ನೇ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್​ ಕ್ವಾಲಿಟಿ ಲೈಫ್‌ ನಲ್ಲಿ ಭಾರತಕ್ಕೆ 59ನೇ ಸ್ಥಾನ

ಡಿಜಿಟಲ್​ ಕ್ವಾಲಿಟಿ ಲೈಫ್‌ನಲ್ಲಿ ಜಾಗತಿಕ ಶ್ರೇಯಾಂಕದಲ್ಲಿ ಭಾರತವು 59 ನೇ ಸ್ಥಾನದಲ್ಲಿದ್ದು, ಮೂಲ ಸೌಕರ್ಯದಲ್ಲಿ ಬಹಳ ದುರ್ಬಲವಾಗಿದೆ ಎಂದು ವರದಿ ತಿಳಿಸಿದೆ.

ಡಿಜಿಟಲ್​ ಗುಣಮಟ್ಟವನ್ನು ಮೇಲ್ಮಟ್ಟಕ್ಕೇರಿಸುವಲ್ಲಿ ಸುಧಾರಿಸಿಲ್ಲ, ಕಳೆದ ವರ್ಷದಿಂದ ದೇಶವು ತನ್ನ ಶ್ರೇಯಾಂಕವನ್ನು ಬದಲಾಯಿಸಿಲ್ಲ. ಈ ಪಟ್ಟಿಯಲ್ಲಿ ಡೆನ್ಮಾರ್ಕ್​ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ ತನ್ನ ಇ-ಮೂಲಸೌಕರ್ಯವನ್ನು ಶೇಕಡಾ 70ರಷ್ಟು ಸುಧಾರಿಸಬೇಕಾಗಿದೆ.

ವಿಪಿಎನ್​ ಸೇವಾ ಕಂಪನಿಯ ವಾರ್ಷಿಕ ವರದಿಯಲ್ಲಿ ಈ ಅಂಶಗಳಿದ್ದು, ಭಾರತದಲ್ಲಿ ಇಂರ್ಟನೆಟ್​ ಗುಣಮಟ್ಟವು ತುಲನಾತ್ಮಕವಾಗಿ ಸಾಧಾರಣವಾಗಿದೆ. ಇಂಟರ್ನೆಟ್ ಗುಣಮಟ್ಟ, ಇಂಟರ್ನೆಟ್​ ವೇಗ, ಸ್ಥಿರತೆ ಮತ್ತು ಬೆಳವಣಿಗೆಯನ್ನು ಪರಿಗಣಿಸಿ ವಿಶ್ವದಲ್ಲಿ 57 ನೇ ಸ್ಥಾನದಲ್ಲಿದೆ.

ಇಂಟರ್ನೆಟ್​ ವೇಗಕ್ಕೆ ಸಂಬಂಧಿಸಿದಂತೆ ಭಾರತದ ಸ್ಥಿರ ಬ್ರಾಡ್​ಬ್ಯಾಂಡ್​ ಇಂಟರ್ನೆಟ್​, ಮೊಬೈಲ್​ ಇಂಟರ್​ನೆಟ್​ ಬಳಕೆಗಿಂತ ಉತ್ತಮ ಸ್ಥಾನದಲ್ಲಿದೆ. ಇಂಟರ್ನೆಟ್​ ಕೆೈಗೆಟಕುವ ದರದ ವಿಚಾರದಲ್ಲಿ ಭಾರತವು ವಿಶ್ವದಲ್ಲಿ 21 ನೇ ಸ್ಥಾನದಲ್ಲಿದೆ. ಕಳೆದ ವರ್ಷದಿಂದ ಇದು ಸುಧಾರಿಸಿದೆ ಎಂದು ವರದಿ ಹೇಳಿದೆ. ಜಾಗತಿಕ ಮಾನದಂಡಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್​ ಕೆೈಗೆಟುಕುವಂತಿದೆ, ಆದರೆ ಸುಧಾರಣೆಗೆ ಇನ್ನೂ ಅವಕಾಶವಿದೆ ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...