alex Certify ʼಖುಷಿʼ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಸಿಕ್ಕಿದೆ ಈ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಖುಷಿʼ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಸಿಕ್ಕಿದೆ ಈ ಸ್ಥಾನ

India ranks 139 in World Happiness Report, Pak happier at 105: Here's list of 20 happiest nations

ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ ನೆಟ್ವರ್ಕ್, ವಿಶ್ವದ ಸಂತೋಷ ವರದಿ 2021 ಬಿಡುಗಡೆ ಮಾಡಿದೆ. ಫಿನ್ಲ್ಯಾಂಡ್ ಮತ್ತೊಮ್ಮೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂಬ ಕೀರ್ತಿಗೆ ಪಾತ್ರವಾಗಿದೆ. ಈ ಪಟ್ಟಿಯಲ್ಲಿ ಭಾರತ 139ನೇ ಸ್ಥಾನದಲ್ಲಿದೆ. 2019 ರಲ್ಲಿ ಭಾರತ 140 ನೇ ಸ್ಥಾನದಲ್ಲಿತ್ತು.

ಇದೊಂದು ಐತಿಹಾಸಿಕ ಸಮೀಕ್ಷೆಯಾಗಿದ್ದು, ಇದು ನಾಗರಿಕರ ಸಂತೋಷಕ್ಕೆ ಅನುಗುಣವಾಗಿ ವರದಿ ಸಿದ್ಧಪಡಿಸುತ್ತದೆ. ಇದ್ರಲ್ಲಿ 149 ದೇಶಗಳನ್ನು ಸೇರಿಸಲಾಗಿದೆ. ಈ ಬಾರಿ ಕೋವಿಡ್ -19 ರ ಪ್ರಭಾವ ಮತ್ತು ಪ್ರಪಂಚದಾದ್ಯಂತದ ಜನರು ಹೇಗೆ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಗಮನ ನೀಡಲಾಗಿದೆ. ವಾರ್ಷಿಕ ವರದಿಯು, ತಲಾ ಜಿಡಿಪಿ, ಆರೋಗ್ಯಕರ ಜೀವನ ಮತ್ತು ನಾಗರಿಕರ ಅಭಿಪ್ರಾಯಗಳ ಆಧಾರದ ಮೇಲೆ ಸ್ಥಾನ ನೀಡುತ್ತದೆ.

ಡೂಡಲ್ ಮೂಲಕ ‘ವಸಂತ ಋತು’ ಆಗಮನ ಸ್ವಾಗತಿಸಿದ ಗೂಗಲ್

ಫಿನ್ಲೆಂಡ್ ಸತತ ನಾಲ್ಕನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಉಳಿದುಕೊಂಡಿದೆ. ಐಸ್ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್, ಸ್ವೀಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ. ವರದಿಯ ಪ್ರಕಾರ ಪಾಕಿಸ್ತಾನ 105 ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 101 ನೇ ಸ್ಥಾನ ಮತ್ತು ಚೀನಾ 84 ನೇ ಸ್ಥಾನದಲ್ಲಿದೆ. ಯುದ್ಧ ಪೀಡಿತ ದೇಶ ಅಫ್ಘಾನಿಸ್ತಾನ ಕೊನೆ ಸ್ಥಾನದಲ್ಲಿದೆ. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಅಮೆರಿಕಾ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...