alex Certify BIG NEWS: ಐಟಿ ವಲಯಕ್ಕೆ ಮತ್ತೊಂದು ಶಾಕ್ – ಮೇ ಅಲ್ಲ, ಜೂನ್ ಗೂ ಮುಗಿಯಲ್ಲ – ಜುಲೈ 31 ರವರೆಗೆ ವರ್ಕ್ ಫ್ರಮ್ ಹೋಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಟಿ ವಲಯಕ್ಕೆ ಮತ್ತೊಂದು ಶಾಕ್ – ಮೇ ಅಲ್ಲ, ಜೂನ್ ಗೂ ಮುಗಿಯಲ್ಲ – ಜುಲೈ 31 ರವರೆಗೆ ವರ್ಕ್ ಫ್ರಮ್ ಹೋಮ್

ನವದೆಹಲಿ: ಜುಲೈ 31 ರ ವರೆಗೆ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವಿಸ್ತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ವರ್ಕ್ ಫ್ರಂ ಹೋಮ್ ವಿಸ್ತರಿಸಲು ಅಸ್ತು ಎಂದಿದೆ.

ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಈ ಕುರಿತು ಮಾಹಿತಿ ನೀಡಿ, ಜುಲೈ 31ರ ಬಳಿಕ ಸೌಲಭ್ಯ ವಿಸ್ತರಣೆ ಕುರಿತು ಮಾಹಿತಿ  ನೀಡಲಾಗುವುದು ಎಂದು ಹೇಳಿದ್ದಾರೆ. ಪರಿಸ್ಥಿತಿ ಆಧರಿಸಿ ಸೌಲಭ್ಯ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಐಟಿ ಸಿಬ್ಬಂದಿಗೆ ಜುಲೈ 31 ರವರೆಗೆ ವರ್ಕ್ ಫ್ರಮ್ ಹೋಮ್ ಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಷರತ್ತುಗಳೊಂದಿಗೆ ಹಲವು ವಾಣಿಜ್ಯ ಚಟುವಟಿಕೆ ನಿರ್ವಹಣೆಗೆ ಅನುಮತಿ ನೀಡಲಾಗಿದೆ. ಕಡಿಮೆ ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಣೆಗೆ ಐಟಿ ವಲಯದ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಇದೇ ವೇಳೆ ಜುಲೈ 31 ರ ವರೆಗೆ ವರ್ಕ್ ಫ್ರಂ ಹೋಮ್ ಗೆ ಕೇಂದ್ರ ಸರ್ಕಾರ ಅವಧಿ ವಿಸ್ತರಣೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...