alex Certify ಪತಿ ಇದ್ದರೂ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಅಮಾನವೀಯ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಇದ್ದರೂ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಅಮಾನವೀಯ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಝಬುವಾದ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ರಣವಾಸ್ ಗ್ರಾಮದಲ್ಲಿ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪಂಚಾಯಿತಿ ಕಟ್ಟೆ ಮುಖಂಡರು ಅಮಾನವೀಯ ಶಿಕ್ಷೆ ನೀಡಿದ್ದಾರೆ.

ಗ್ರಾಮದ ಮಹಿಳೆ ಗಂಡನಿದ್ದರೂ ವಿವಾಹೇತರ ಸಂಬಂಧ ಬೆಳೆಸಿದ್ದು ಆಕೆಯ ಪತಿಗೆ ವಿಷಯ ಗೊತ್ತಾಗಿ ಪಂಚಾಯಿತಿ ಮುಖಂಡರಿಗೆ ದೂರು ನೀಡಿದ್ದಾನೆ.

ಪಂಚಾಯಿತಿ ನಡೆಸಿದ ಮುಖಂಡರು, ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದರಿಂದ ಗಂಡನನ್ನು ಹೆಗಲಮೇಲೆ ಹೊತ್ತುಕೊಂಡು ಗ್ರಾಮವನ್ನು ಒಂದು ಸುತ್ತು ಸುತ್ತುವಂತೆ ಅಮಾನವೀಯ ಶಿಕ್ಷೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು 7 ಮಂದಿ ಪಂಚಾಯಿತಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...