alex Certify ವಾಟ್ಸಾಪ್ ಮೂಲಕ ಪ್ರೀತಿಪಾತ್ರರೊಂದಿಗೆ ಆಚರಿಸಿ ಕ್ರಿಸ್​ಮಸ್​ ಹಬ್ಬ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಮೂಲಕ ಪ್ರೀತಿಪಾತ್ರರೊಂದಿಗೆ ಆಚರಿಸಿ ಕ್ರಿಸ್​ಮಸ್​ ಹಬ್ಬ..!

ಕೊರೊನಾ ಸಂಕಷ್ಟದಿಂದಾಗಿ ಈ ಬಾರಿಯ ಕ್ರಿಸ್​ಮಸ್​ ಆಚರಣೆ ಬಹಳ ವಿಭಿನ್ನವಾಗಿದೆ. ಪ್ರತಿ ವರ್ಷದಂತೆ ಈ ಬಾರಿ ದೂರದ ಕುಟುಂಬಸ್ಥರ ಜೊತೆ ಇಲ್ಲವೇ ಪ್ರೀತಿ ಪಾತ್ರರ ಜೊತೆ ಸೇರಿ ಹಬ್ಬ ಆಚರಣೆ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಕ್ರಿಸ್​ಮಸ್​ ಹಬ್ಬಕ್ಕೆ ಶುಭಕೋರ ಬಯಸುವ ಬಳಕೆದಾರರಿಗೆ ಹೊಸ ಸೌಲಭ್ಯ ನೀಡಿದೆ.

ಸಾಮಾಜಿಕ ಅಂತರದಿಂದ ಹಬ್ಬದ ಸಂಭ್ರಮಕ್ಕೆ ಕೊರತೆಯಾಗೋದು ಬೇಡ ಅಂತಾ ವಾಟ್ಸಾಪ್​ ಕ್ರಿಸ್​ಮಸ್​ ಹಬ್ಬಕ್ಕೆಂದೇ ವಿಶೇಷವಾಗಿ ಸ್ಟಿಕರ್​ಗಳನ್ನ ಲಾಂಚ್ ಮಾಡಿದೆ. ನಿಮ್ಮ ಭಾವನೆಗಳನ್ನ ಹೊರ ಹಾಕೋಕೆ ವಾಟ್ಸಾಪ್​ ಸ್ಟಿಕರ್ಸ್ ತುಂಬಾನೇ ಸಹಾಯ ಮಾಡುತ್ತೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಬೇಕಾದ ಈಗಿನ ಪರಿಸ್ಥಿತಿಯಲ್ಲಿ ನಿಮ್ಮ ಹಬ್ಬದ ಸಂಭ್ರಮ ಮಂಕಾಗಬಾರದೆಂದು ಈ ಸ್ಟಿಕರ್ಸ್ ನೀಡುತ್ತೇವೆ ಎಂದು ವಾಟ್ಸಾಪ್​ ಹೇಳಿದೆ.

ಈ ಸ್ಟಿಕರ್ಸ್​ಗಳನ್ನ ಡೌನ್​ಲೋಡ್​ ಮಾಡಲು ನೀವು ಹೆಚ್ಚೇನು ಮಾಡಬೇಕಾಗಿಲ್ಲ. ವಾಟ್ಸಾಪ್​ನಲ್ಲಿ ಸ್ಟಿಕರ್ ಆಯ್ಕೆಯನ್ನ ಕ್ಲಿಕ್​ ಮಾಡಿ. ಅಲ್ಲಿರುವ ಪ್ಲಸ್​ ಆಯ್ಕೆಯನ್ನ ಪ್ರೆಸ್​ ಮಾಡಿ. ಇಲ್ಲಿ ನಿಮಗೆ ಕ್ರಿಸ್​ಮಸ್​ ಸ್ಟಿಕರ್​ ಸಿಗಲಿದ್ದು ನೀವು ಡೌನ್​ ಲೋಡ್​ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...