alex Certify ಉತ್ತಮ ಮಳೆಯಾಗಲೆಂದು ಕಪ್ಪೆಗಳಿಗೆ ಮದುವೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಮಳೆಯಾಗಲೆಂದು ಕಪ್ಪೆಗಳಿಗೆ ಮದುವೆ….!

Frogs married off in Tripura to please rain god. Watch viral video - Trending News News

ಕೊರೊನಾ ಕಾಲದಿಂದಾಗಿ ಮದುವೆ ಕಾರ್ಯಕ್ರಮಗಳ ರೂಪವೇ ಬದಲಾಗಿ ಹೋಗಿದೆ. ಸಾವಿರಾರು ಮಂದಿ ಸೇರುತ್ತಿದ್ದ ಕಾರ್ಯಕ್ರಮದಲ್ಲಿ ಈಗೀಗ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಕಾಣುವಂತಾಗಿದೆ. ಕೋವಿಡ್​ ಸಂಕಷ್ಟದಲ್ಲಿ ಮನುಷ್ಯರ ಮದುವೆ ಮಾಡೋದೇ ಕಷ್ಟವಾಗಿರೋವಾಗ ಇಲ್ಲೊಂದು ಕಡೆ ಕಪ್ಪೆಗಳಿಗೆ ಮದುವೆ ಮಾಡಲಾಗಿದೆ.

ಎಲ್ಲರೂ ಕೋವಿಡ್​ ಬಗ್ಗೆ ತಲೆಕೆಡಿಸಿಕೊಂಡಿರುವ ಈ ಸಂದರ್ಭದಲ್ಲಿ ತ್ರಿಪುರಾದ ಜನತೆ ಮಾನ್ಸೂನ್​ ಮಳೆ ಬರಲಿ ಎಂದು ಪ್ರಾರ್ಥಿಸುತ್ತಾ ಎರಡು ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ.

ಇಲ್ಲಿನ ಸ್ಥಳೀಯರು ಕಪ್ಪೆಗಳಿಗೆ ಮದುವೆ ಮಾಡಿದ್ರೆ ವರುಣ ದೇವ ತೃಪ್ತನಾಗುತ್ತಾನೆ ಎಂಬ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಒಳ್ಳೆಯ ಮಳೆಗಾಲ ಬರಲಿ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ.

ರಾಜ್ಯದಲ್ಲಿ ಇವತ್ತೂ ಕೊರೋನಾ ಅಬ್ಬರ, 5.17 ಲಕ್ಷ ಸಕ್ರಿಯ ಪ್ರಕರಣ

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕಪ್ಪೆಗಳಿಗೆ ಹಾರ ಹಾಕಿ, ಸಿಂಧೂರವನ್ನ ಹಚ್ಚಿ ಶಾಸ್ತ್ರೋಸ್ತ್ರವಾಗಿ ಮದುವೆ ಮಾಡಲಾಗಿದೆ.

ಈ ರೀತಿಯ ಆಚರಣೆಗಳು ನೋಡೋಕೆ ವಿಚಿತ್ರ ಎನಿಸಬಹುದು. ಆದರೆ ಈ ರೀತಿ ಕಪ್ಪೆಗಳನ್ನ ಮದುವೆ ಮಾಡುವ ಪದ್ಧತಿ ಬಹಳ ಹಳೆಯ ಕಾಲದಿಂದಲೂ ನಡೆದುಕೊಂಡು ಬರ್ತಿದೆ. ಮದುವೆ ಮಾತ್ರವಲ್ಲ……ಕೆಲವೊಮ್ಮೆ ಅತಿಯಾಗಿ ಮಳೆ ಬಂದರೆ ಕಪ್ಪೆಗಳಿಗೆ ವಿಚ್ಚೇದನ ನೀಡುವ ಪದ್ಧತಿಯೂ ನಮ್ಮಲ್ಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...