alex Certify ಬಯಲಾಯ್ತು ಟ್ವಿಟರ್​ನಲ್ಲಿ ವೈರಲ್​ ಆದ ಈ ʼವಿಡಿಯೋʼದ ಅಸಲಿ ಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಟ್ವಿಟರ್​ನಲ್ಲಿ ವೈರಲ್​ ಆದ ಈ ʼವಿಡಿಯೋʼದ ಅಸಲಿ ಕತೆ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್​ ಅಧಿಕಾರಿಗೆ ಮುಸ್ಲಿಂ ಮಹಿಳೆ ಹಾಗೂ ಪುರುಷ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. 25 ಸೆಕೆಂಡ್​ಗಳ ವಿಡಿಯೋವನ್ನ ಟ್ವಿಟರ್​​ನಲ್ಲಿ ಗಗನ್​ ಗೋಯಲ್​ ಪೋಸ್ಟ್ ಮಾಡಿದ್ದಾರೆ. ಸಲ್ವಾರ್​ ತೊಟ್ಟಿರುವ ಮುಸ್ಲಿಂ ಮಹಿಳೆ ಉತ್ತರ ಪ್ರದೇಶ ಬರೇಲಿಯಲ್ಲಿ ಈ ರೀತಿ ಪೊಲೀಸ್​ ಅಧಿಕಾರಿಗೆ ಥಳಿಸಿದ್ದಾಳೆ.

ಗೋಯಲ್​ ಈ ಪೋಸ್ಟ್​​ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಉತ್ತರ ಪ್ರದೇಶ ಪೊಲೀಸ್​ ಇಲಾಖೆಯನ್ನ ಟ್ಯಾಗ್​ ಮಾಡಿದ್ದಾರೆ. ಭಾರತದ ಭವಿಷ್ಯ ಏನಾಗಲಿದೆ ಅನ್ನೋದು ಈ ವಿಡಿಯೋದಲ್ಲಿ ಕಾಣುತ್ತಿದೆ ಎಂದು ಶೀರ್ಷಿಕೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಕಾರ್ಯಕರ್ತೆ ಮಧು ಕಿಶ್ವಾರ್​ ಸೇರಿದಂತೆ ಅನೇಕರು ಈ ವಿಡಿಯೋ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಮಧು ಕಿಶ್ವಾರ್​ ಸೇರಿದಂತೆ ಅನೇಕರು ಹಂಚಿಕೊಂಡಿರುವ ಈ ವಿಡಿಯೋ ಈಗಿನದ್ದಲ್ಲ. ಬದಲಾಗಿ ಇದು ಆಗಸ್ಟ್ 2018ರಲ್ಲಿ ನಡೆದ ಘಟನೆ ಅನ್ನೋದು ಫ್ಯಾಕ್ಟ್​ ಚೆಕ್​​ನಲ್ಲಿ ಬಯಲಾಗಿದೆ. ಎಸ್​​ಬಿಐ ಬ್ಯಾಂಕ್​​​ಗೆ ಆಧಾರ್​ ಕಾರ್ಡ್​ ಸರಿ ಮಾಡಿಸಲು ಬಂದಿದ್ದ ಮಹಿಳೆ ಈ ಕೃತ್ಯ ಎಸಗಿದ್ದು 2018ರಲ್ಲೇ ಆಕೆಯ ವಿರುದ್ಧ ದೂರು ದಾಖಲಾಗಿದೆ.

ಕಿಶ್ವರ್​ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ತಪ್ಪು ಮಾಹಿತಿ ನೀಡ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೊಲ್ಕತ್ತಾದಲ್ಲಿ ಇಸ್ಲಾಮಿಕ್​ ಱಲಿ ಸಂಬಂಧ ವಿಡಿಯೋವೊಂದನ್ನ ಕಿಶ್ವಾರ್​ ಹಂಚಿಕೊಂಡಿದ್ದರು. ಬಳಿಕ ಅವರು ಕೊಲ್ಕತ್ತಾ ಪೊಲೀಸರ ಬಳಿ ಕ್ಷಮೆಯನ್ನೂಯಾಚಿಸಿದ್ದಾರೆ.

— वन्दे भारतम् Ms Gagan Goyal (@gagangoyal1968) January 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...