alex Certify ಮೋದಿಯನ್ನು ಕೊಲ್ಲುತ್ತೇವೆ ಎಂದ 6 ವರ್ಷದ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಯನ್ನು ಕೊಲ್ಲುತ್ತೇವೆ ಎಂದ 6 ವರ್ಷದ ಬಾಲಕ..!

ಕೊರೊನಾ ಕರಿನೆರಳು ದೇಶ ಬಿಟ್ಟು ಹೋಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹಾಗೆಯೇ ದಿನದಿಂದ ದಿನಕ್ಕೆ ಗುಣಮುಖ ಆಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದ ವಿರುದ್ಧ ಹೋರಾಡಿ ಗೆದ್ದವರಿಗೆ ಖುಷಿಯಿಂದ ಆಸ್ಪತ್ರೆ ಸಿಬ್ಬಂದಿ ಬೀಳ್ಕೊಡುತ್ತಿದ್ದಾರೆ.

ಹೀಗೆ ಕೊರೊನಾದ ವಿರುದ್ಧ ಹೋರಾಡಿ ಗೆದ್ದಿರುವ ಕುಟುಂಬವೊಂದರ ಸದಸ್ಯರಿಗೆ ಆಸ್ಪತ್ರೆ ಬೀಳ್ಕೊಡಿಗೆ ನೀಡಿದೆ. ಈ ಸಂದರ್ಭದಲ್ಲಿ ಆರು ವರ್ಷದ ಬಾಲಕನೊಬ್ಬ ಹಮ್ ಮೋದಿ ಕೋ ಮಾರೇಂಗೆ ಎಂದು ಹೇಳಿದ್ದಾನೆ. ಇಂದೋರ್‌ನ ಇಂಡೆಕ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬಳಿ ಈ ಬಾಲಕ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳುವುದನ್ನು ಕೇಳಿದ ಅಲ್ಲಿದ್ದ ಮಂದಿ ದಿಗ್ಭ್ರಮೆಗೊಂಡಿದ್ದಾರೆ. ಈ ಬಾಲಕನ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿ ಟ್ವಿಟ್ ಮಾಡಿರುವ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಈ ಪುಟ್ಟ ಮಗುವಿನ ಮನಸ್ಸಲ್ಲಿ ಯಾರು ಈ ರೀತಿ ಕೆಟ್ಟ ಅಭಿಪ್ರಾಯ ಬಿತ್ತಿದ್ದಾರೆ. ಇಂತಹ ಮಾತು ಆಡಲು ಪ್ರೇರಣೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...