alex Certify ಮಕ್ಕಳಿಗಾಗಿ ತಯಾರಾಯ್ತು ಫುಲ್ಲಿ ‌ಲೋಡೆಡ್ ಎಲೆಕ್ಟ್ರಿಕ್ ಜೀಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗಾಗಿ ತಯಾರಾಯ್ತು ಫುಲ್ಲಿ ‌ಲೋಡೆಡ್ ಎಲೆಕ್ಟ್ರಿಕ್ ಜೀಪ್

ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ನಿವಾಸಿ ಶಕೀರ್ ಎಂಬಾತ ತಮ್ಮ ಮಕ್ಕಳಿಗಾಗಿ ಅಪರೂಪದ ಆಟಿಕೆ ಸೃಷ್ಟಿಸಿ ಸುದ್ದಿಯಾಗಿದ್ದಾರೆ.

ಅವರು ಮಿನಿ ಎಲೆಕ್ಟ್ರಿಕ್ ಜೀಪ್ ಸೃಷ್ಟಿಸಿದ್ದು, ಅದು 1000-ವ್ಯಾಟ್ ಮೋಟರ್ ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಪವರ್ ಸ್ಟೀರಿಂಗ್ ಹೊಂದಿದೆ. ಡಿಟ್ಯಾಚೇಬಲ್ ಸಾಫ್ಟ್ ಟಾಪ್, ಮ್ಯಾನುಯಲ್ ಗೇರ್ ಬಾಕ್ಸ್ ಮತ್ತು ಹೆಡ್ ಲೈಟ್ ಗಳನ್ನು ಸಹ ಹೊಂದಿದೆ.

ಜಾಲತಾಣದಲ್ಲಿ ವೈರಲ್ ಆಯ್ತು ನಕಲಿ ಮಾರ್ಗಸೂಚಿ

ಇದಲ್ಲದೆ ಇದು ಚಾಲಕ ಮತ್ತು ಪ್ರಯಾಣಿಕರಿಗೆ ಎರಡು ಆಸನಗಳನ್ನು ಹೊಂದಿದೆ. ಹಿಂಭಾಗದ ಪ್ರತಿಯೊಂದು ಬದಿಯಲ್ಲಿ ಸೀಟ್‌ಗಳಿವೆ.

ಪವರ್ ವಿಂಡೋ, ಎಲ್ಇಡಿ ಬಲ್ಬ್, ಹೊಂದಾಣಿಕೆ ಮಾಡುವ ಸೀಟ್ ವ್ಯವಸ್ಥೆ, ಮ್ಯೂಸಿಕ್ ಸಿಸ್ಟಂ ವ್ಯವಸ್ಥೆ ಸಹ ಹೊಂದಿದೆ. ಈ ಫುಲ್ಲೀ ಲೋಡೆಡ್ ಜೀಪ್ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊದಲ್ಲಿ ಕಾಣುವಂತೆ, 5-6 ಕ್ಕೂ ಹೆಚ್ಚು ಮಕ್ಕಳಿಗೆ ಕೂರಲು ಅವಕಾಶವಾಗಲಿದೆ. ಆದರೆ ದೊಡ್ಡವರು ಕಾರಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಕಾಲುಗಳನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ.

കുട്ടികൾക്ക് വേണ്ടി വീട്ടിൽ നിർമ്മിച്ച ജീപ്പ്!!

കുട്ടികൾക്ക് വേണ്ടി വീട്ടിൽ നിർമ്മിച്ച ഒറിജിനലിനെ വെല്ലുന്ന ജീപ്പ്!!

Posted by Madhurification Hangout on Saturday, April 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...