alex Certify ಸೈನಿಕರಿಗಾಗಿ ರೋಬೋಟ್ ಹೆಲ್ಮೆಟ್ ತಯಾರಿಸಿದ ವಿದ್ಯಾರ್ಥಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನಿಕರಿಗಾಗಿ ರೋಬೋಟ್ ಹೆಲ್ಮೆಟ್ ತಯಾರಿಸಿದ ವಿದ್ಯಾರ್ಥಿನಿ

Varanasi Student Develops 'Robo Helmet' to Help Soldiers in War ...

ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳು ರೋಬೋಟ್ ಹೆಲ್ಮೆಟ್ ಒಂದನ್ನು ತಯಾರಿಸಿದ್ದಾರೆ. ಇದು ಯುದ್ಧದಂಥ ಸಂದರ್ಭದಲ್ಲಿ ಸೈನಿಕರಿಗೆ ರೇಡಿಯೋ ಸಿಗ್ನಲ್ ಒದಗಿಸುತ್ತದೆ. ಸ್ವತಃ ಗುಂಡು ಹಾರಿಸುತ್ತದೆ. ರಿಮೋಟ್ ಆಧಾರಿತ ಹೆಲ್ಮೆಟ್ ನಲ್ಲಿ, ಮೈಕ್ರೊ ಗನ್, ವೈರ್ ಲೆಸ್ ವ್ಯವಸ್ಥೆಯನ್ನು ಹೊಂದಿದೆ.

ಅಶೋಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ನ ಅಂಜಲಿ ಶ್ರೀವಾಸ್ತವ ಈ ಡಿವೈಸ್ ತಯಾರಿಸಿದ್ದು, ಇದು ಮುಂದೆ ಸೇನೆಗೆ ಹೆಚ್ಚು ನೆರವಾಗುವ ನಿರೀಕ್ಷೆ ಇದೆ. “ರಕ್ಷಣಾ ಪಡೆಗಳಿಗಾಗಿಯೇ ನಾನು ಈ ಮಾದರಿ ಸಿದ್ಧ ಮಾಡಿದ್ದೇನೆ.‌ ಇದನ್ನು ಉತ್ಪಾದನೆ‌ ಮಾಡಿ ಸೈನ್ಯಕ್ಕೆ ಬಳಸುವ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ” ಎಂದು ಅಂಜಲಿ ಹೇಳಿದ್ದಾರೆ.

ಲೈಟ್ ವೇಟ್ ಇರುವ ಈ ಶಿರಸ್ತ್ರಾಣ 360 ಡಿಗ್ರಿ ತಿರುಗಬಲ್ಲದು. 50 ಮೀಟರ್ ದೂರ ನಿಂತು ರಿಮೋಟ್ ಮೂಲಕ ನಿಯಂತ್ರಿಸಬಹುದು, 100 ಮೀಟರ್ ವರೆಗೆ ಹೆಲ್ಮೆಟ್ ಗುಂಡು ಹಾರಿಸಬಲ್ಲದು‌. ಶತ್ರು ಸೈನಿಕನ ಹಿಂದಿನಿಂದ ಬಂದರೂ ಸೆನ್ಸರ್ ಮೂಲಕ ಸೂಚನೆ ನೀಡುತ್ತದೆ. ಅದರಲ್ಲಿ ಅಳವಡಿಸಿರುವ ರಿಮೋಟ್ ಸೆನ್ಸರ್ ಆಧಾರಿತ ಟ್ರಿಗರ್ ಒತ್ತಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...