alex Certify ʼಕೊರೊನಾʼ ಸೋಂಕಿತರ ಮನೆ ಬಾಗಿಲಿಗೆ ಉಚಿತ ಊಟ ತಲುಪಿಸಲು ಮುಂದಾದ ಸಹೃದಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕಿತರ ಮನೆ ಬಾಗಿಲಿಗೆ ಉಚಿತ ಊಟ ತಲುಪಿಸಲು ಮುಂದಾದ ಸಹೃದಯಿ

Vadodara Man's Generous Offer to Deliver Free Food at Doorstep of Covid-19 Patients Goes Viral

ಕೋವಿಡ್-19 ಸಾಂಕ್ರಮಿಕ ತಂದಿಟ್ಟ ಅನೇಕ ದುರಂತ ಕಥೆಗಳ ನಡುವೆ ಮಾನವೀಯತೆಯ ಸಾಕಾರ ರೂಪದ ಅನೇಕ ವ್ಯಕ್ತಿಗಳು ಮಾಡುತ್ತಿರುವ ನಿಸ್ವಾರ್ಥ ಸೇವೆಯ ವಿಚಾರಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಗುಜರಾತ್‌‌ನ ವಡೋದರಾದ ಶುಭಾಲ್ ಶಾಹ್ ಎಂಬ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಮೆಸೇಜ್ ಮೂಲಕ ತಮ್ಮನ್ನು ಸಂಪರ್ಕಿಸಿ ಭೋಜನದ ಅಗತ್ಯವಿದ್ದಲ್ಲಿ ಕೇಳಬಹುದು ಎಂದಿದ್ದು, ಕೋವಿಡ್-19ನಿಂದ ಬಳಲುತ್ತಿರುವ ಕುಟುಂಬಗಳಿಗೆ ಶುಚಿಯಾದ ಭೋಜನವನ್ನು ಅವರವರ ಮನೆ ಬಾಗಿಲುಗಳಿಗೇ ಉಚಿತವಾಗಿ ತಲುಪಿಸಲಾಗುವುದು ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ದಿಕ್ಕಿಗೊಂದು ದೇಹದ ಭಾಗ, ರುಂಡ-ಮುಂಡ ಕತ್ತರಿಸಿ ಬರ್ಬರ ಹತ್ಯೆ

“ಈ ಕೋವಿಡ್ ಸಂಕಷ್ಟದ ಅವಧಿಯಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಕುಟುಂಬವೇನಾದರೂ ಕೋವಿಡ್‌-19ನಿಂದ ನರಳುತ್ತಿದ್ದಲ್ಲಿ, ನಾವು ನಿಮ್ಮ ಮನೆ ಬಾಗಿಲಿಗೆ ಮದ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಕ್ವಾರಂಟೈನ್‌ ಅವಧಿಯುದ್ದಕ್ಕೂ ನಿಶ್ಶುಲ್ಕವಾಗಿ ತಲುಪಿಸುತ್ತೇವೆ. ನಾವು ಯಾವುದೇ ಹೆಸರು, ಪ್ರಚಾರ ಅಥವಾ ಫೋಟೋಗಳಿಗೆ ಈ ಕೆಲಸ ಮಾಡುತ್ತಿಲ್ಲ” ಎಂದು ಟ್ವಿಟರ್‌ನ ತಮ್ಮ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ ಶುಭಾಲ್.

ಶುಭಾಲ್‌ರ ಟ್ವೀಟ್‌ಗೆ ಸಾಕಷ್ಟು ಸಕಾರಾತ್ಮಕ ಸ್ಪಂದನೆಗಳು ಸಿಕ್ಕಿದ್ದು, ಅನೇಕ ಎನ್‌ಜಿಓಗಳೂ ಸಹ ಅವರೊಂದಿಗೆ ಕೈ ಜೋಡಿಸಿ ಅಗತ್ಯವಿದ್ದವರಿಗೆ ಹಸಿವು ನೀಗಿಸಲು ಕೆಲಸ ಮಾಡಲು ಉತ್ಸುಕವಾಗಿರುವುದಾಗಿ ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...