alex Certify ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ದಿಕ್ಕಿಗೊಂದು ದೇಹದ ಭಾಗ, ರುಂಡ-ಮುಂಡ ಕತ್ತರಿಸಿ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ದಿಕ್ಕಿಗೊಂದು ದೇಹದ ಭಾಗ, ರುಂಡ-ಮುಂಡ ಕತ್ತರಿಸಿ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ರುಂಡ, ಮುಂಡ ದೇಹದ ಭಾಗಗಳನ್ನು ಕತ್ತರಿಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.

ನಗರದ ಕುಸುಗಲ್ ರಸ್ತೆಯ ಶಾಲೆಯೊಂದರ ಸಮೀಪ ಮೃತದೇಹ ಪತ್ತೆಯಾಗಿದೆ. ರುಂಡ-ಮುಂಡ, ದೇಹದ ಭಾಗಗಳನ್ನು ಕತ್ತರಿಸಿ ಎಸೆಯಲಾಗಿದೆ. ಮೃತದೇಹದ ಸ್ವಲ್ಪ ದೂರದಲ್ಲಿ ಎರಡು ಕೈ ಮತ್ತು ಒಂದು ಕಾಲು ದೊರೆತಿದ್ದು ಇನ್ನೊಂದು ಕಾಲಿಗಾಗಿ ಹುಡುಕಾಟ ನಡೆಸಲಾಗಿದೆ. ಮೃತದೇಹವನ್ನು ಸುಡಲು ಪ್ರಯತ್ನ ನಡೆಸಲಾಗಿದೆ. ಸ್ಥಳಕ್ಕೆ ಕೇಶವಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ವ್ಯಕ್ತಿ ಯಾರು ಎನ್ನುವುದು ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...