alex Certify ಪಿಪಿಇ ಕಿಟ್​ ಧರಿಸಿ ಮದುವೆ ದಿಬ್ಬಣದ ಎದುರು ಕುಣಿದು ಕುಪ್ಪಳಿಸಿದ ಆಂಬುಲೆನ್ಸ್ ಚಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಧರಿಸಿ ಮದುವೆ ದಿಬ್ಬಣದ ಎದುರು ಕುಣಿದು ಕುಪ್ಪಳಿಸಿದ ಆಂಬುಲೆನ್ಸ್ ಚಾಲಕ..!

ದೇಶದಲ್ಲಿ ಕಳೆದ ವರ್ಷದಿಂದ ಕೊರೊನಾ ವೈರಸ್​ ಜನರ ನಿದ್ದೆಗೆಡಿಸಿದ್ದು ಜನರ ಜೀವವನ್ನ ಕಾಪಾಡಲು ಆರೋಗ್ಯ ಸಿಬ್ಬಂದಿ ಇನ್ನಿಲ್ಲದ ಶ್ರಮ ಪಡ್ತಿದ್ದಾರೆ. ಆರೋಗ್ಯ ಸಿಬ್ಬಂದಿಯೂ ಸಹ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ.

ಉತ್ತರಾಖಂಡ್​ನಲ್ಲೂ ನಿರಂತರ ಕೆಲಸದಿಂದ ಕುಗ್ಗಿ ಹೋಗಿದ್ದ ಆಂಬುಲೆನ್ಸ್​ ಚಾಲಕನೊಬ್ಬ ಪಿಪಿಇ ಕಿಟ್​ ಧರಿಸಿ ಮದುವೆ ದಿಬ್ಬಣದ ಎದುರು ಕುಣಿಯುವ ಮೂಲಕ ತಮ್ಮ ಒತ್ತಡದಿಂದ ನಿರಾಳರಾಗಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮಹೇಶ್​ ಎಂಬ ಆಂಬುಲೆನ್ಸ್ ಚಾಲಕ ಪಿಪಿಇ ಕಿಟ್ ಧರಿಸಿಕೊಂಡೇ ಮದುವೆ ದಿಬ್ಬಣದ ಎದುರು ಕುಣಿದಿದ್ದಾರೆ. ಮದುವೆಗೆ ಆಗಮಿಸಿದ್ದ ಇತರೆ ಅತಿಥಿಗಳು ಈ ವಿಡಿಯೋವನ್ನ ಸೆರೆ ಹಿಡಿದು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಸೋಮವಾರ ರಾತ್ರಿ ಸುಶೀಲಾ ತಿವಾರಿ ಮೆಡಿಕಲ್​ ಕಾಲೇಜು ಎದುರು ಮದುವೆ ದಿಬ್ಬಣ ಹೋಗುತ್ತಿರೋದನ್ನ ಕಂಡ ಮಹೇಶ್​​ ಆಂಬುಲೆನ್ಸ್​ನಿಂದ ಕೆಳಗೆ ಇಳಿದು ಬಂದು ಟಪ್ಪಾಂಗುಚ್ಚಿ ನೃತ್ಯ ಮಾಡಿದ್ದಾರೆ. ಮೊದಲು ಮಹೇಶ್​ರನ್ನ ಆಶ್ಚರ್ಯದಿಂದ ಕಂಡ ಮದುವೆ ಮನೆಯವರು ಬಳಿಕ ಅವರೊಂದಿಗೆ ಹೆಜ್ಜೆ ಹಾಕಿದ್ದನ್ನ ಕಾಣಬಹುದಾಗಿದೆ.

— Mrs. Lucifer ? (@Ar_Shivangni) April 27, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...