alex Certify ಗರ್ಲ್​‌ ಫ್ರೆಂಡ್​ ಆಸೆ ತೀರಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್​‌ ಫ್ರೆಂಡ್​ ಆಸೆ ತೀರಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ..!

ನಮಗೆ ಬೇಕಾಗಿದ್ದು ಸಿಗಲಿ ಅಂತಾ ದೇವರ ಮೊರೆ ಹೋಗೋದು ಕಾಮನ್​. ಕೆಲವೊಮ್ಮೆ ದೇವರಿಗೆ ಹರಕೆಯನ್ನೂ ಕಟ್ಟಿಕೊಳ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ಲ್ಯಾಂಬರ್ಗಿನಿ ಕಾರಿಗಾಗಿ ಹರಕೆ ಹೊರಲು ಹೋಗಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾನೆ.

40 ದಿನಗಳ ಕಾಲ ಹಗಲುರಾತ್ರಿಯೆನ್ನದೇ ಉಪವಾಸ ಮಾಡಿದ್ರೆ ದೇವರಿಂದ ಲ್ಯಾಂಬರ್ಗಿನಿ ಸಿಗುತ್ತೆಂದು ನಂಬಿ ಈ ಹರಕೆಯನ್ನ ಹೊತ್ತಿದ್ದಾನೆ. ಅಂದಹಾಗೆ ಈತ ಈ ಕಾರನ್ನ ತನ್ನ ಗರ್ಲ್​ಫ್ರೆಂಡ್​ಗೆ ಗಿಫ್ಟ್​ ಮಾಡಬೇಕು ಎಂದುಕೊಂಡಿದ್ದನಂತೆ.

ಜಿಂಬಾಬ್ವೆಯ ಬಿಂದುರಾದ ರೈಸನ್ಸ್​ ಸೇಂಟ್ಸ್ ಚರ್ಚ್​ನ ಯುವ ಮುಖಂಡನಾದ ಮಾರ್ಕ್​ ಮುರಾಡಿರಾ, ಪರ್ವತವೊಂದರಲ್ಲಿ ಊಟ ತಿಂಡಿಯಿಲ್ಲದೇ ಕಾಲ ಕಳೆದಿದ್ದಾನೆ.

ನಿರುದ್ಯೋಗಿಯಾಗಿದ್ದ ಮಾರ್ಕ್, ತನ್ನ ಗರ್ಲ್​ಫ್ರೆಂಡ್​ಗೆ ಆಕೆ ಕೇಳಿದ ಉಡುಗೊರೆಯನ್ನ ನೀಡಬೇಕು ಎಂಬ ಆಸೆಯನ್ನ ಹೊಂದಿದ್ದ ಎನ್ನಲಾಗಿದೆ. ಗರ್ಲ್​ಫ್ರೆಂಡ್​ ಬಯಸಿದ್ದ ಲ್ಯಾಂಬರ್ಗಿನಿ ಕಾರು ಕೊಡಿಸಲು 1.54 ಕೋಟಿ ರೂಪಾಯಿ ಬೇಕು. ಇಷ್ಟೊಂದು ಹಣ ಹೊಂದಿಸೋದು ಅಸಾಧ್ಯ ಎಂದು ತಿಳಿದ ಮಾರ್ಕ್ ದೇವರ ಮೊರೆ ಹೋಗಿದ್ದನಂತೆ.

ಆದರೆ ಈತನ ಪ್ಲಾನ್​ ವರ್ಕೌಟ್​ ಆಗಿಲ್ಲ. 33 ದಿನಗಳ ಬಳಿಕ ಈತನನ್ನ ಪತ್ತೆ ಮಾಡುವಲ್ಲಿ ಸ್ನೇಹಿತರು ಯಶಸ್ವಿಯಾಗಿದ್ದು ಬಿಂದುರಾದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚರ್ಚ್​ನ ವತಿಯಿಂದ ದೇಣಿಗೆ ಸಂಗ್ರಹಿಸಿ ಆ ಹಣದಿಂದ ಆಸ್ಪತ್ರೆ ಬಿಲ್​ ಭರಿಸಲಾಗಿದೆ. ಮಾರ್ಕ್ ಆರೋಗ್ಯ ನಿಧಾನವಾಗಿ ಚೇತರಿಕೆ ಕಾಣ್ತಿದೆ ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...