alex Certify ಬಾಬಾ ರಾಮ್​ದೇವ್ ‘ಈಡಿಯಟ್​’ ಎಂದ ನಿರ್ಮಾಪಕ ಹನ್ಸಲ್​ ಮೆಹ್ತಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬಾ ರಾಮ್​ದೇವ್ ‘ಈಡಿಯಟ್​’ ಎಂದ ನಿರ್ಮಾಪಕ ಹನ್ಸಲ್​ ಮೆಹ್ತಾ..!

ಭಾರತೀಯ ವೈದ್ಯಕೀಯ ಸಂಘದಲ್ಲಿ ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರ ಸಮಯವನ್ನ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿ ಬಾಬಾ ರಾಮದೇವ್​ರನ್ನ ಈಡಿಯಟ್​ ಎಂದು ನಿರ್ಮಾಪಕ ಹನ್ಸಲ್​ ಮೆಹ್ತಾ ಜರಿದಿದ್ದಾರೆ.

ಅಲೋಪತಿಯನ್ನ ಸ್ಟುಪಿಡ್​ ಸೈನ್ಸ್ ಎಂದು ವಿವಾದ ಸೃಷ್ಟಿಸಿದ್ದ ಬಾಬಾ ರಾಮ್​ದೇವ್​ ಬಳಿಕ ಕ್ಷಮೆಯಾಚಿಸಿದ್ದರು. ಆದರೆ ಕ್ಷಮೆ ಕೇಳಿದ 24 ಗಂಟೆಯೊಳಗಾಗಿ ಅಲೋಪತಿಯ ವಿರುದ್ಧ ಐಎಂಎಗೆ 25 ಪ್ರಶ್ನೆಗಳನ್ನ ಕೇಳಿದ್ದರು. ಈ ಪ್ರಶ್ನೆಗಳಲ್ಲಿ ಅಧಿಕ ರಕ್ತದೊತ್ತಡ ಹಾಗೂ ಡಯಾಬಿಟೀಸ್​ನಂತಹ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಇದೆಯೇ ಎಂದು ಕೇಳಿದ್ದರು.

ಇದೀಗ ಬಾಬಾ ರಾಮದೇವ್​ರ ಈ ಪ್ರಶ್ನೆ ಸಂಬಂಧ ಪ್ರತಿಕ್ರಿಯಿಸಿರುವ ಹನ್ಸಲ್​ ಮೆಹ್ತಾ ಈ ಈಡಿಯಟ್​ ಮುಂಚೂಣಿ ಕಾರ್ಯಕರ್ತರ ಸಮಯವನ್ನ ವ್ಯರ್ಥ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಅಲೋಪತಿಯಲ್ಲಿ ಅಧಿಕ ರಕ್ತದೊತ್ತಡ, ಟೈಪ್ 1 & ಟೈಪ್​ 2 ಡಯಾಬಿಟೀಸ್​, ಸಂಧಿವಾತ, ಥೈರಾಯ್ಡ್, ತಲೆನೋವು, ಮೈಗ್ರೇನ್​ ಸೇರಿದಂತೆ ಇನ್ನೂ ಅನೇಕ ಕಾಯಿಲೆಗಳಿಗೆ ಅಲೋಪತಿಯಲ್ಲಿ ಶಾಶ್ವತ ಪರಿಹಾರ ಇದೆಯೇ ಎಂದು ಭಾರತೀಯ ವೈದ್ಯಕೀಯ ಸಂಘವನ್ನ ಟ್ವಿಟರ್​ನಲ್ಲಿ ಬಹಿರಂಗ ಪತ್ರವನ್ನ ಹರಿಬಿಡುವ ಮೂಲಕ ಬಾಬಾ ರಾಮ್‌ ದೇವ್ ಪ್ರಶ್ನಿಸಿದ್ದರು.

— Hansal Mehta (@mehtahansal) May 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...