alex Certify ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇನ್ನು 3 ಸಾವಿರ ಟೋಕನ್ ಉಚಿತವಾಗಿ ನೀಡಲಾಗುವುದು.

ಲಾಕ್ಡೌನ್ ಕಾರಣ ಸ್ಥಗಿತಗೊಂಡಿದ್ದ ಉಚಿತ ದರ್ಶನ ಟೋಕನ್ ವ್ಯವಸ್ಥೆಗೆ ತಿರುಪತಿ-ತಿರುಮಲ ದೇವಸ್ಥಾನ ಮಂಡಳಿ ಮತ್ತೆ ಚಾಲನೆ ನೀಡಿದೆ. ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ 3000 ಟೋಕನ್ ನೀಡಲಾಗುವುದು. ದರ್ಶನಕ್ಕೆ ಬರುವ ಭಕ್ತರು ತಿರುಮಲದ ಭೂದೇವಿ ಕಾಂಪ್ಲೆಕ್ಸ್ ನಲ್ಲಿ ಉಚಿತ ಟೋಕನ್ ಪಡೆದುಕೊಳ್ಳಬಹುದು. ಇದರಿಂದ ಶುಲ್ಕ ರಹಿತವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗುತ್ತದೆ.

ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ದರ್ಶನ ಸ್ಥಗಿತಗೊಳಿಸಲಾಗಿತ್ತು. ಅನ್ಲಾಕ್ ನಂತರ ದೇವರ ದರ್ಶನಕ್ಕೆ ಅವಕಾಶ ನೀಡಿದ್ದರೂ ಆನ್ಲೈನ್ ನಲ್ಲಿ ಶುಲ್ಕ ಪಾವತಿಸಿ ಟಿಕೆಟ್ ಪಡೆದವರಿಗೆ ದರ್ಶನ ನೀಡಲಾಗುತ್ತಿತ್ತು. ಟಿಟಿಡಿ ತಿಮ್ಮಪ್ಪನ ದರ್ಶನಕ್ಕೆ ಇನ್ನು ಮುಂದೆ ನಿತ್ಯ 3000 ಟೋಕನ್ ಉಚಿತವಾಗಿ ನೀಡಲು ತೀರ್ಮಾನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...