ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವ ಕೊರೋನಾ ಸೋಂಕಿಗೆ ಸೆಡ್ಡು ಹೊಡೆದು ಅಡ್ಡ ನಿಂತಿರುವ ರೊಬೋಟ್ ಗಳು, ಕಾಣದ ವೈರಾಣುವಿನ ವಿರುದ್ಧ ಸೇನಾನಿಗಳಾಗಿ ಹೋರಾಡುತ್ತಿವೆ.
ಸೋಂಕು ಹರಡುವಿಕೆಯ ಸರಪಳಿ ಕತ್ತರಿಸಲು, ವೈದ್ಯರು, ಶುಶ್ರೂಷಕರ ಮೇಲಿನ ಒತ್ತಡ ಕಡಿಮೆ ಮಾಡಲು ರೊಬೋಟ್ ಗಳೇ ಪರಿಹಾರ ಎನ್ನುವಂತಾಗಿದೆ.
ಹೀಗಾಗಿ ತ್ರಿಪುರಾದ ರಾಸಾಯನಿಕ ಮತ್ತು ಪಾಲಿಮರ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹರ್ಜೀತ್ ನಾಥ್ ಎಂಬುವರು ಮನೆಯಲ್ಲಿ ತ್ಯಾಜ್ಯ ವಸ್ತುಗಳನ್ನು ಬಳಸಿ ರೋಬೋ ಸಿದ್ಧಪಡಿಸಿದ್ದಾರೆ.
ಮೋಟರ್, ರೀಚಾರ್ಜೇಬಲ್ ಬ್ಯಾಟರಿ, ಯುಎಸ್‌ಬಿ ಔಟ್ ಪುಟ್ ಸೇರಿದಂತೆ ಇನ್ನಿತರ ಪರಿಕರ ಉಪಯೋಗಿಸಿದ್ದು, ನಾಲ್ಕು ಚಕ್ರಗಳ ಮೇಲೆ ಇದು ಚಲಿಸಲಿದೆ.
ಸುಮಾರು 15 ಕೆಜಿ ತೂಕದ ಪದಾರ್ಥಗಳನ್ನು ಸಾಗಿಸಬಲ್ಲ ಇದು, 20 ಮೀಟರ್ ದೂರದಿಂದಲೂ ಕಾರ್ಯಾಚರಣೆ ಮಾಡಲಿದೆ.
ಅಂದಾಜು 1 ಗಂಟೆಗಳ ಸತತ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ರೋಬೋ, ರೋಗಿಗಳಿಗೆ ಊಟ, ಔಷಧಿ, ನೀರಿನ ಬಾಟಲ್ ಇತ್ಯಾದಿಗಳನ್ನ ತಲುಪಿಸುವ ಕೆಲಸ ಮಾಡಬಲ್ಲುದು.
ಇಷ್ಟೆಲ್ಲ ಬಹುಉಪಯೋಗಿ ರೋಬೋಟ್ ತಯಾರಿಸಲು ಖರ್ಚಾದದ್ದು ಕೇವಲ 25 ಸಾವಿರ ರೂಪಾಯಿ ಎನ್ನುತ್ತಾರೆ ಹರ್ಜೀತ್.