alex Certify ಕೋಟಿ ಮೌಲ್ಯಕ್ಕೆ ಸೇಲ್​ ಆಯ್ತು ರೊಬೋಟ್​ ರಚಿಸಿದ ಡಿಜಿಟಲ್​ ಕಲಾಕೃತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಿ ಮೌಲ್ಯಕ್ಕೆ ಸೇಲ್​ ಆಯ್ತು ರೊಬೋಟ್​ ರಚಿಸಿದ ಡಿಜಿಟಲ್​ ಕಲಾಕೃತಿ…!

ಮನುಷ್ಯರೂಪಿ ರೊಬೋಟ್​​ ಸೋಫಿಯಾ ರಚಿಸಿರುವ ಡಿಜಿಟಲ್​ ಆರ್ಟ್​ ವರ್ಕ್​ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 5,05,05,134.83 ರೂಪಾಯಿಗೆ ಮಾರಾಟವಾಗಿದೆ. ಎನ್​ಎಫ್​ಟಿ ರೂಪದಲ್ಲಿ ಆರ್ಟ್​ವರ್ಕ್​ ಖರೀದಿ ಮಾಡಲಾಗಿದೆ.

2016ರಲ್ಲಿ ರೂಪುಗೊಂಡ ರೋಬೋಟ್ ಸೋಫಿಯಾ ವರ್ಣರಂಜಿತ ಕಲಾಕೃತಿಗೆ ಫೇಮಸ್​ ಆಗಿರುವ 31 ವರ್ಷದ ಇಟಾಲಿಯನ್ ಡಿಜಿಟಲ್​ ಕಲಾವಿದೆ ಬೊನಾಸೆಟೋ ಅವರ ಸಹಯೋಗದಲ್ಲಿ ಈ ಕಲಾಕೃತಿಗಳನ್ನ ರಚಿಸಿದೆ. ಈ ಡಿಜಿಟಲ್​ ಕಲಾಕೃತಿಯಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್​ ಮಸ್ಕ್​ ಸೇರಿದಂತೆ ಅನೇಕರು ಸೇರಿದ್ದಾರೆ.

ರೊಬೋಟ್​ಗಳ ಹೊಸ ತಂತ್ರಜ್ಞಾನದ ಬಗ್ಗೆ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡ್ತಾರೆ ಅನ್ನೋದನ್ನ ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಬೆಳ್ಳಿ ಬಣ್ಣದ ಧಿರಿಸನ್ನ ಧರಿಸಿದ್ದ ರೊಬೋಟ್​ ಸೋಫಿಯಾ ವರದಿಗಾರರಿಗೆ ಹೇಳಿದೆ.

ಈ ಡಿಜಿಟಲ್​ ಕಲಾಕೃತಿಯನ್ನ ಕೊಂಡ ವ್ಯಕ್ತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...