alex Certify ಮನೆಮನೆಗೆ ಹಾಲು ಸರಬರಾಜು ಮಾಡುತ್ತೆ ಈ ರೊಬೋಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಮನೆಗೆ ಹಾಲು ಸರಬರಾಜು ಮಾಡುತ್ತೆ ಈ ರೊಬೋಟ್

ಈಗಿನ ಕಾಲ ಎಷ್ಟು ಮುಂದುವರಿದಿದೆ ಅಂದರೆ ಮನೆಯಲ್ಲಿ ಕೂತುಕೊಂಡೇ ಆಹಾರ ಪದಾರ್ಥ, ಬಟ್ಟೆ, ದಿನಸಿ ವಸ್ತುಗಳು, ಔಷಧಿಗಳನ್ನೆಲ್ಲಾ ಆರ್ಡರ್​ ಮಾಡಿಬಿಡಬಹುದು. ಹೋಮ್​ ಡೆಲಿವರಿ ಇಲ್ಲದೇ ಬದುಕೋದು ಹೇಗೆ ಎಂಬಷ್ಟರ ಮಟ್ಟಿಗೆ ನಾವು ಇದಕ್ಕೆ ಒಗ್ಗಿ ಹೋಗಿದ್ದೇವೆ.

ಆದರೆ ಇದೀಗ ಕೊರೊನಾ ವೈರಸ್​ ತಾಂಡವ ವಿಶ್ವದಲ್ಲಿ ಇರೋದ್ರಿಂದ ಜನರು ಡೆಲಿವರಿ ಬಾಯ್​ಗಳಿಂದ ಪಾರ್ಸೆಲ್​ ತೆಗೆದುಕೊಳ್ಳೋಕೆ ಭಯಪಡ್ತಾರೆ. ಆದರೆ ಇದಕ್ಕೂ ಕೂಡ ಸಿಂಗಾಪುರದ ಕಂಪನಿಯೊಂದು ಹೊಸ ಐಡಿಯಾ ಹುಡುಕಿದೆ. ಇಲ್ಲಿ ರೊಬೊಟ್​ಗಳು ಹೋಂ ಡೆಲಿವರಿಯನ್ನ ಕೊಡುತ್ತಿವೆ.

ಕ್ಯಾಮೆಲ್ಲೊ ಎಂಬ ಹೆಸರಿನ ಈ ರೊಬೋಟ್​​ಗಳನ್ನ ಓಟಿಎಸ್​ಎಬಡಬ್ಲೂ ಎಂಬ ಕಂಪನಿ ತಯಾರಿಸಿದೆ. ಈ ರೋಬೋಟ್​ಗಳು ಮೊದಲನೇ ವರ್ಷದ ಪ್ರಾಯೋಗಿಕ ಪರೀಕ್ಷೆ ಪ್ರಯುಕ್ತ 700 ಮನೆಗಳಿಗೆ ಡೆಲಿವರಿಯನ್ನ ನೀಡುತ್ತಿವೆ.

ಕ್ಯಾಮರಾ, ತ್ರಿಡಿ ಸೆನ್ಸಾರ್​ ಹಾಗೂ 2 ಕಂಪಾರ್ಟ್​ಮೆಂಟ್​​ಗಳನ್ನ ಈ ರೊಬೋಟ್​ಗಳು ಹೊಂದಿವೆ. 20 ಕೆಜಿ ವಸ್ತುವನ್ನ ಹೊರುವ ಸಾಮರ್ಥ್ಯ ಇರುವ ಈ ರೊಬೋಟ್​ಗಳು ದಿನಕ್ಕೆ ನಾಲ್ಕರಿಂದ ಐದು ಡೆಲಿವರಿ ಮಾಡುತ್ತವೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಒಟಿಎಸ್​ಎಡಬ್ಲೂ ಚೀಫ್​ ಎಕ್ಸಿಕ್ಯೂಟಿವ್​​ ಲಿಂಗ್​ ಟಿಂಗ್​ ಮಿಂಗ್​, ಕೊರೊನಾದಿಂದಾಗಿ ಈಗ ಎಲ್ಲರೂ ಸಂಪರ್ಕರಹಿತ ಸೇವೆಯನ್ನ ಬಯಸುತ್ತಾರೆ. ಇದೇ ಉದ್ದೇಶವನ್ನ ಗಮನದಲ್ಲಿ ಇಟ್ಟುಕೊಂಡು ಇಂತಹ ರೊಬೋಟ್​ಗಳನ್ನ ತಯಾರಿಸಿದ್ದೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...