alex Certify ಹಾಲಿವುಡ್​ ಸಾಂಗ್​​ ಗೆ ಹೆಜ್ಜೆ ಹಾಕಿದ ರೋಬೋ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿವುಡ್​ ಸಾಂಗ್​​ ಗೆ ಹೆಜ್ಜೆ ಹಾಕಿದ ರೋಬೋ: ವಿಡಿಯೋ ವೈರಲ್​

ಅಮೆರಿಕನ್​ ಇಂಜಿನಿಯರಿಂಗ್​ ಹಾಗೂ ರೊಬೊಟಿಕ್ಸ್ ವಿನ್ಯಾಸ ಕಂಪನಿಯಾದ ಬೋಸ್ಟನ್​ ಡೈನಾಮಿಕ್ಸ್ ಈ ವರ್ಷ ತನ್ನ ಜನಪ್ರಿಯ ಕಲೆಕ್ಷನ್​ ರೋಬೋ ಡಾಗ್​ ಮೂಲಕವೇ ಹೆಚ್ಚು ಸುದ್ದಿಯಾಗಿದೆ.

ಮೇ ತಿಂಗಳಲ್ಲಿ ಸಿಂಗಾಪುರ ಉದ್ಯಾನವನಕ್ಕೆ ಭೇಟಿ ನೀಡುವವರಿಗೆ ಸಾಮಾಜಿಕ ದೂರ ಕಾಪಾಡಿಕೊಳ್ಳಲು ನಯವಾಗಿ ಹೇಳುವ ಮೂಲಕ ಈ ರೊಬೋ ಡಾಗ್​ ಜನಪ್ರಿಯವಾಯ್ತು.

ಸೆಪ್ಟೆಂಬರ್​ನಲ್ಲಿ ಈ ರೊಬೊ ಡಾಗ್​ನ ಮತ್ತೊಂದು ವಿಡಿಯೋ ಟ್ವಿಟರ್​ನಲ್ಲಿ ಸಖತ್​ ವೈರಲ್​ ಆಗಿತ್ತು. ತೀರಾ ಇತ್ತೀಚೆಗೆ ಬ್ರಿಸ್ಟಲ್​ ವಿಶ್ವವಿದ್ಯಾಲಯದ ಇಂಜಿನಿಯರ್​ಗಳೊಂದಿಗೆ ಚೆರ್ನೊಬಿಲ್​ ನ್ಯೂಕ್ಲಿಯರ್​ ಸ್ಥಾವರದಲ್ಲಿ ಈ ರೊಬೋ ಡಾಗ್​ ಕಾಣಿಸಿಕೊಳ್ತು.

1986ರ ಪರಮಾಣು ಅಪಘಾತದಿಂದಾಗಿ ಈ ಪ್ರದೇಶ ಅತ್ಯಂತ ಅಪಾಯಕಾರಿ ಸ್ಥಳವಾಗಿ ಬದಲಾದ್ದರಿಂದ ಇಂಜಿನಿಯರ್​​ಗಳು ಇದೇ ರೊಬೋಡಾಗ್​ ಬಳಸಿ ಈ ಸ್ಥಳದ ಸಮೀಕ್ಷಾ ವರದಿ ತಯಾರಿಸಿದ್ದರು.

ಇದೀಗ 2020 ಅಂತ್ಯಗೊಳ್ಳುವ ಮುನ್ನ ಮತ್ತೊಮ್ಮೆ ಸುದ್ದಿಯಾಗಿದೆ ರೊಬೋ ಡಾಗ್​. ಆದರೆ ಈ ಬಾರಿ ರೊಬೋ ಡಾಗ್​​ ಒಬ್ಬಂಟಿಯಾಗಿ ಸುದ್ದಿಯಾಗಿಲ್ಲ. ಬದಲಾಗಿ ಇತರೆ ಮೂರು ರೊಬೋಟ್​ಗಳ ಜೊತೆ ಸೇರಿ ಡು ಯು ಲವ್​ ಮಿ ಹಾಡಿಗೆ ಹೆಜ್ಜೆ ಹಾಕಿದೆ.

ರೊಬೊಟಿಕ್ಸ್ ಕಂಪನಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆ ಮಾಡಿದೆ. 2 ನಿಮಿಷ 54 ಸೆಕೆಂಡ್​ನ ಈ ವಿಡಿಯೋದಲ್ಲಿ ರೊಬೋಟ್​​ಗಳು ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿದ್ದು ವಿಡಿಯೋ ಸಖತ್​ ವೈರಲ್​ ಆಗಿದೆ.

;

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...