alex Certify ಕಣ್ಣಂಚನ್ನು ತೇವಗೊಳಿಸುತ್ತೆ 70 ರ ವೃದ್ದೆ ಸಂಕಷ್ಟದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ 70 ರ ವೃದ್ದೆ ಸಂಕಷ್ಟದ ವಿಡಿಯೋ

ಜೀವನೋಪಾಯಕ್ಕಾಗಿ ಪಂಜಾಬ್​ನ ಬೀದಿಯಲ್ಲಿ ಪುಟ್ಟ ಅಂಗಡಿ ಹಾಕಿಕೊಂಡಿರುವ ವೃದ್ಧೆಯ ವಿಡಿಯೋ ವೈರಲ್​ ಆಗಿದ್ದು ಸ್ಟಾರ್​ ಗಾಯಕ ಹಾಗೂ ನಟ ದಿಲ್ಜೀತ್​ ದೋಸಾಂಜ್​ ಸೇರಿದಂತೆ ಹಲವರ ಗಮನ ಸೆಳೆದಿದೆ.

ಜಲಂಧರ್​ನ ಫಾಗ್ವಾರಾ ಗೇಟ್​ ಮಾರುಕಟ್ಟೆಯ ಬದಿಯಲ್ಲಿ ಪುಟ್ಟ ಅಂಗಡಿ ಹಾಕಿಕೊಂಡಿರುವ 70 ವರ್ಷ ವೃದ್ಧೆ ದಾಲ್​, ಸಬ್ಜಿ ಹಾಗೂ ಪರೋಟಗಳನ್ನ ಮಾರಾಟ ಮಾಡುತ್ತಿದ್ದಾರೆ . ಜನರು ದೊಡ್ಡ ಹೋಟೆಲ್​ಗಳಲ್ಲಿ ಕೇಳಿದಷ್ಟು ಹಣ ಕೊಟ್ಟು ಆಹಾರ ಸೇವಿಸ್ತಾರೆ. ಆದರೆ ನನ್ನ ಅಂಗಡಿಯಲ್ಲಿ ಆಹಾರವು ಕೈಗೆಟಕುವ ದರದಲ್ಲಿ ದೊರೆಯುತ್ತೆ ಅಂತಾ ವೃದ್ಧೆ ಹೇಳಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಪತಿಯ ಮರಣಾನಂತರ ಈ ವೃದ್ಧೆ ಈ ರೀತಿ ಬೀದಿ ಬದಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದಾಳೆ ಎನ್ನಲಾಗಿದೆ. ಈ ವಿಡಿಯೋ ನೋಡಿದ 36 ವರ್ಷದ ಗಾಯಕ ದಲ್ಜೀತ್​ ದೋಸಾಂಜ್​, ಈ ಮಾರುಕಟ್ಟೆ ಕಡೆಗೆ ಹೋದರೆ ಈ ವೃದ್ಧೆಯನ್ನ ಭೇಟಿಯಾಗೋಕೆ ಮರೆಯದಿರಿ ಅಂತಾ ಮನವಿ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...