alex Certify ಆಟೋ ಚಾಲಕಿಯಾಗುವ ಮೂಲಕ ಕುಟುಂಬಕ್ಕೆ ಆಸರೆಯಾದ 21 ವರ್ಷದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋ ಚಾಲಕಿಯಾಗುವ ಮೂಲಕ ಕುಟುಂಬಕ್ಕೆ ಆಸರೆಯಾದ 21 ವರ್ಷದ ಯುವತಿ…!

This 21-year-old Female Auto Driver is Shattering Stereotypes and Supporting  her Family in a Pandemicಕೊರೊನಾ ವೈರಸ್​ ಸಂಕಷ್ಟ ಹಾಗೂ ಲಾಕ್​ಡೌನ್​ ಕಾಟದಿಂದಾಗಿ ಈ ಬಾರಿ ಅನೇಕರು ತಮ್ಮ ಕೆಲಸಗಳನ್ನ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇದೇ ರೀತಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದ ರಕ್ಷಣೆಗೆ ಪಣತೊಟ್ಟ 21 ವರ್ಷದ ಯುವತಿ ತನ್ನ ತಂದೆಯ ಆಟೋವನ್ನ ಓಡಿಸುವ ಮೂಲಕ ಸುದ್ದಿಯಾಗಿದ್ದಾಳೆ.

ಜಮ್ಮು ಕಾಶ್ಮೀರದ ಉಧಾಮ್​ಪುರ ಜಿಲ್ಲೆಯ ಬಂಜೀತ್​ ಕೌರ್​​ ತಂದೆ ಸ್ಕೂಲ್​ ಬಸ್​​ ಡ್ರೈವರ್ ಆಗಿದ್ದರು. ಆದರೆ ಆಕೆಯ ತಂದೆ ತಮ್ಮ ಕೆಲಸವನ್ನ ಕಳೆದುಕೊಂಡಿದ್ರು. ಕುಟುಂಬ ನಿರ್ವಹಣೆಗಾಗಿ ಆಕೆಯ ತಂದೆ ಆಟೋ ಓಡಿಸೋಕೆ ಪ್ರಾರಂಭಿಸಿದ್ರು. ಆದರೆ ಆಟೋ ಚಾಲಕನಾಗಿ ಸಂಪಾದನೆ ಮಾಡೋದು ತಂದೆಗೆ ಕಷ್ಟವಾಗಿದ್ದನ್ನ ಕಂಡ ಬಂಜೀತ್​ ತಾವೇ ಈ ಕೆಲಸಕ್ಕೆ ಇಳಿದಿದ್ದಾರೆ.

ಆಟೋ ರಿಕ್ಷಾವನ್ನ ಓಡಿಸಿ ಮನೆಯನ್ನ ಸಾಕುತ್ತಿರುವ ಕೌರ್​ ತಮ್ಮ ವ್ಯಾಸಂಗವನ್ನೂ ಅಪೂರ್ಣ ಮಾಡಿಕೊಂಡಿಲ್ಲ. ರಕ್ಷಣಾ ಇಲಾಖೆಗೆ ಸೇರಬೇಕೆಂಬ ಕನಸನ್ನ ಕಂಡಿರುವ ಕೌರ್​, ಇದಕ್ಕಾಗಿ ವ್ಯಾಸಂಗವನ್ನೂ ಮಾಡುತ್ತಿದ್ದಾರೆ. ಸರ್ದಾರ್​ ಗೋರಖ್​​ ಕೌರ್​ ತಮ್ಮ ಮಗಳ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...