alex Certify ನವ ದಂಪತಿಗೆ ’ಆನಂದಭಾಷ್ಪ’ ತರಿಸಿದ ದುಬಾರಿ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವ ದಂಪತಿಗೆ ’ಆನಂದಭಾಷ್ಪ’ ತರಿಸಿದ ದುಬಾರಿ ಉಡುಗೊರೆ

ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಇದೇ ವಿಚಾರವನ್ನು ಹಾಸ್ಯದ ಸರಕಾಗಿಸಿಕೊಂಡು ಸೃಷ್ಟಿಸಿರುವ ಮೆಮೆಗಳು ಸಾಕಷ್ಟು ವೈರಲ್ ಆಗಿವೆ.

ಈ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸ್ನೇಹಿತರ ಗುಂಪೊಂದು ನವವಿವಾಹಿತ ದಂಪತಿಗಳಿಗೆ ಉಡುಗೊರೆಯಾಗಿ ಈರುಳ್ಳಿಯ ಗೊಂಚಲೊಂದನ್ನು ಕೊಟ್ಟಿದ್ದಾರೆ.

ಮದುವೆಯ ಔತಣಕೂಟದಲ್ಲಿ ಭಾಗಿಯಾದ ವೇಳೆ, ಸುಂದರವಾದ ಗಿಫ್ಟ್‌ ಪ್ಯಾಕಿಂಗ್ ಮಾಡಲಾದ ಈರುಳ್ಳಿಗಳ ಗೊಂಚಲನ್ನು ನವದಂಪತಿಗಳಿಗೆ ನೀಡಲಾಗಿದೆ.

“ಈರುಳ್ಳಿ ಬೆಲೆ 125ರೂ/ಕೆಜಿಗೆ ಏರಿರುವುದನ್ನು ಅರಿತ ನಾವು ನವದಂಪತಿಗೆ ಮೂರು ಕೆಜಿ ಈರುಳ್ಳಿಯನ್ನು ಉಡುಗೊರೆಯನ್ನಾಗಿ ಕೊಡಲು ನಿರ್ಧರಿಸಿದೆವು. ಅಂಗಡಿಯಿಂದ ಖರೀದಿಸಿ ಅದನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೊಟ್ಟಿದ್ದೇವೆ” ಎಂದು ಮದುಮಗಳ ಸ್ನೇಹಿತೆ ಹೇಮಲತಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...