alex Certify ಅಚ್ಚರಿಗೆ ಕಾರಣವಾಗಿದೆ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಾನೇ ಇದೆ. ಈ ನಡುವೆ 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ವ್ಯಕ್ತಿ ಸುಶಾಂತ್​ ಸಿಂಗ್​ ರಜಪೂತ್​ ಅಂತೆ.

ಹಾಗೂ ಮಹಿಳೆಯರಲ್ಲಿ ಸುಶಾಂತ್​ ಪ್ರಿಯತಮೆ ರಿಯಾ ಚಕ್ರವರ್ತಿ ಅತೀ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿ ಆಗಿದ್ದಾರೆ ಎಂದು ಯಾಹೂ ಸಂಸ್ಥೆ ತಿಳಿಸಿದೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಈ ಘಟನೆ ಬಳಿಕ ಭಾರತೀಯರು ಸುಶಾಂತ್​ ಹಾಗೂ ರಿಯಾ ಬಗ್ಗೆ ಅತೀ ಹೆಚ್ಚು ಹುಡುಕಾಟ ನಡೆಸಿದ್ದಾರೆ.

2017ರಿಂದಲೂ ಪ್ರಧಾನಿ ನರೇಂದ್ರ ಮೋದಿ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಇರ್ತಿದ್ರು. ಆದರೆ ಈ ವರ್ಷ ಪ್ರಧಾನಿ ಮೋದಿ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ರಿಯಾ ಮೂರನೇ ಸ್ಥಾನದಲ್ಲಿದ್ರೆ, ರಾಹುಲ್​ ಗಾಂಧಿ, ಅಮಿತ್​ ಶಾ, ಉದ್ದವ್​ ಠಾಕ್ರೆ, ಅರವಿಂದ್​ ಕೇಜ್ರಿವಾಲ್​, ಮಮತಾ ಬ್ಯಾನರ್ಜಿ. ಅಮಿತ್​ ಬಚ್ಚನ್​ ಹಾಗೂ ಕಂಗನಾ ರಣಾವತ್​ ಕ್ರಮವಾಗಿ ನಂತರದ ಸ್ಥಾನಗಳನ್ನ ಪಡೆದಿದ್ದಾರೆ.

ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳಲ್ಲೂ ಸುಶಾಂತ್​ ಸಿಂಗ್ ರಜಪೂತ್​ ಮೊದಲನೇ ಸ್ಥಾನ ಅಲಂಕರಿಸಿದ್ದಾರೆ. ಅಮಿತಾಭ್​ ಬಚ್ಚನ್​ ಎರಡನೇ ಸ್ಥಾನದಲ್ಲಿದ್ರೆ, ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಇರ್ಫಾನ್​ ಖಾನ್​ ಹಾಗೂ ರಿಷಿ ಕಪೂರ್​ ನಂತರದ ಸ್ಥಾನಗಳನ್ನ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...