alex Certify ನೂರಾರು ಕಿ.ಮೀ. ದೂರದಿಂದಲೇ ಗೋಚರಿಸಿದ ಹಿಮಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂರಾರು ಕಿ.ಮೀ. ದೂರದಿಂದಲೇ ಗೋಚರಿಸಿದ ಹಿಮಾಲಯ

ಕೊರೊನಾದಿಂದಾಗಿ ಲಾಕ್ಡೌನ್ ಜಾರಿಯಲ್ಲಿರುವಾಗ ಪ್ರಕೃತಿಯಲ್ಲಿ ಒಂದಷ್ಟು ಬದಲಾವಣೆಗಳು ಕಾಣುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಬಿಹಾರದ ಒಂದು ಗ್ರಾಮದಿಂದ ನೂರಾರು ಕಿಲೋಮೀಟರ್ ದೂರದ ಹಿಮಾಲಯದ ಅದ್ಭುತ ನೋಟವೊಂದರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದ ಸಿತಮರ್ಹಿ ಜಿಲ್ಲೆಯ ಸಿಂಗ್ ವಾಹಿನಿ ಎಂಬ ಗ್ರಾಮದ ಜನಕ್ಕೆ ನೇಪಾಳಕ್ಕೆ ಹೊಂದಿಕೊಂಡಿರುವ ಮೌಂಟ್ ಎವರೆಸ್ಟ್ ಕಾಣಿಸಿದೆ.

ಆ ಗ್ರಾಮದ ಜೈಲ್ವಾಲ್ ಎಂಬುವರು ಗ್ರಾಮದಿಂದ ಕಂಡ ಎವರೆಸ್ಟ್ ಶ್ರೇಣಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಜಾಲತಾಣಕ್ಕೆ ಪರಿಚಯಿಸಿದ್ದಾರೆ.‌ ಪ್ರಕೃತಿಯು ತನ್ನನ್ನು ತಾನೆ ಸಮತೋಲನಗೊಳಿಸಿಕೊಳ್ಳುತ್ತದೆ ಎಂದು ಅವರು ಫೋಟೋಗೆ ತಮ್ಮ‌ಅಭಿಪ್ರಾಯ ದಾಖಲಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ವಾಯುಮಾಲಿನ್ಯ ಕಡಿಮೆಯಾಗಿದೆ, ಹೀಗಾಗಿ ದೂರದಲ್ಲಿನ ಎವರೆಸ್ಟ್ ಗೋಚರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...