alex Certify ಬರೋಬ್ಬರಿ 70 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ ಈ ಗಿಡಮೂಲಿಕೆ; ಬೆರಗಾಗಿಸುವಂತಿದೆ ಇದರ ʼವಿಶೇಷತೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 70 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ ಈ ಗಿಡಮೂಲಿಕೆ; ಬೆರಗಾಗಿಸುವಂತಿದೆ ಇದರ ʼವಿಶೇಷತೆʼ

ಹಿಮಾಲಯದಲ್ಲಿ ಇರುವ ಕೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡ್ತಿದೆ. ಇದು ತನ್ನ ಅಸಾಧಾರಣ ಮೌಲ್ಯದಿಂದಾಗಿ ಜಾಗತಿಕವಾಗಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕ್ಯಾಟರ್ಪಿಲ್ಲರ್​ ಫಂಗಸ್​ ಎಂದೂ ಕರೆಯಲ್ಪಡುವ ಈ ಗಿಡಮೂಲಿಕೆಯು ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ನೀರಿನಲ್ಲಿ ಕುದಿಸಿದ ಬಳಿಕ ಇದನ್ನು ಸಾಮಾನ್ಯವಾಗಿ ಚಹಾ ಅಥವಾ ಸೂಪ್​ನ ರೀತಿಯಲ್ಲಿ ಸೇವಿಸಬಹುದಾಗಿದೆ. ಪಿತ್ತಜನಕಾಂಗದ ಕಾಯಿಲೆ, ನಿತ್ರಾಣ, ಕ್ಯಾನ್ಸರ್​ ಸೇರಿದಂತೆ ಸಾಕಷ್ಟು ಕಾಯಿಲೆಗಳಿಗೆ ಇದರಿಂದ ಪ್ರಬಲ ಪರಿಹಾರ ಸಿಗುತ್ತೆ ಎನ್ನಲಾಗಿದೆ. ಇದು ಕಾಯಿಲೆಗಳನ್ನು ಗುಣಪಡಿಸೋದ್ರ ಜೊತೆಯಲ್ಲಿ ರೋಗಿಗೆ ಹೆಚ್ಚುವರಿ ಚೈತನ್ಯವನ್ನೂ ನೀಡುತ್ತೆ ಎಂದು ಹೇಳಲಾಗಿದೆ.

ಇದು ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಭೂತಾನ್​, ಭಾರತ, ಚೀನಾ ಹಾಗೂ ನೇಪಾಳದಲ್ಲಿ ಕಾಣಸಿಗುತ್ತೆ. 3300 ಮೀಟರ್​ಗಳಿಂದ 4500 ಮೀಟರ್​ ಎತ್ತರವಿರುವ ಜಾಗಗಳಲ್ಲಿ ಇದು ಹೆಚ್ಚಾಗಿ ಕಾಣುತ್ತದೆ. ಇನ್ನೊಂದು ವಿಚಿತ್ರ ಅಂದರೆ ಇದು ಲಾರ್ವಾಗಳ ತಲೆಯ ಮೇಲೆ ಬೆಳೆಯುವ ಗಿಡಮೂಲಿಕೆಯಾಗಿದೆ.

ಈ ಗಿಡಗಳು ಸಾಮಾನ್ಯವಾಗಿ 21 ಡಿಗ್ರಿ ಸೆಲ್ಸಿಯಸ್​ಗಿಂತಲೂ ಕಡಿಮೆ ತಾಪಮಾನದಲ್ಲಿ ಬೆಳೆಯುತ್ತದೆ. ಈ ಗಿಡಮೂಲಿಕೆಗೆ ಎಷ್ಟು ಬೇಡಿಕೆಯಿದೆ ಎಂದರೆ ಕೇವಲ 1 ಕೆಜಿ ಕೀಡಾ ಜಡಿ ಗಿಡ ಮೂಲಿಕೆಯು ಬರೋಬ್ಬರಿ 70 ಲಕ್ಷ ರೂಪಾಯಿಗೆ ಮಾರಾಟವಾಗ್ತಿದೆ ಎಂದರೆ ನೀವು ನಂಬ್ಲೇಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...