alex Certify ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತಯಾರಿಸಲು ಮುಂದಾದ ಆರು ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತಯಾರಿಸಲು ಮುಂದಾದ ಆರು ಮಂದಿ ಅರೆಸ್ಟ್

Six Men Arrested for Making Alcohol from Sanitiser in Tamil Nadu in Covid-19 Lockdown

ದೇಶಾದ್ಯಂತ ಲಾಕ್‌ಡೌನ್ ಇರುವ ಈ ವೇಳೆಯಲ್ಲಿ ಬಲು ಕಷ್ಟ ಅನುಭವಿಸುತ್ತಿರುವ ವರ್ಗವೆಂದರೆ ಅದು ಕುಡುಕರದ್ದು. ಕುಡಿಯಲು ಹೆಂಡ ಸಿಗದೇ ಬರಗೆಟ್ಟಿದ್ದ ತಮಿಳುನಾಡಿನ ಆರು ಮಂದಿ ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತೆಗೆಯಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಕಡಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಯಾನಿಟೈಸರ್‌ನಲ್ಲಿರುವ ಆಲ್ಕೋಹಾಲ್‌ ತೆಗೆಯುತ್ತಿರುವ ವಿಷಯ ತಿಳಿದ ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ಕಾರಣ ಸರ್ಕಾರ ನಡೆಸುವ ಹೆಂಡದಂಗಡಿಗಳನ್ನು ಮುಚ್ಚಲಾಗಿದೆ.

ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ಕ್ಯೂಟ್‌ ವಿಡಿಯೋ

ಈ ಹಿನ್ನೆಲೆಯಲ್ಲಿ ಮೇಲ್ಕಂಡ ಘಟನೆ ನಡೆದಿದೆ. ಇದೇ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದ್ದ 35 ವರ್ಷ ವಯಸ್ಸಿನ ರಾಜ್ಯದ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದರು.

ಆಲ್ಕೋಹಾಲ್ ಸಿಗದೇ ಮೂರು ಲೀಟರ್‌ ಸ್ಯಾನಿಟೈಸರ್‌ ಸೇವನೆ ಮಾಡಿದ ಮಧ್ಯ ಪ್ರದೇಶದ ಭೋಪಾಲ್‌ನ ಮೂವರು ಸಹೋದರರು ಮೃತಪಟ್ಟ ಘಟನೆ ವರ್ಷಾರಂಭದಲ್ಲಿ ಘಟಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...