alex Certify ತಾಯಿಯನ್ನ ಬದುಕಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಿದ ಮಕ್ಕಳು..! ವೈರಲ್​ ಆಯ್ತು ಮನಕಲಕುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಯನ್ನ ಬದುಕಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಿದ ಮಕ್ಕಳು..! ವೈರಲ್​ ಆಯ್ತು ಮನಕಲಕುವ ದೃಶ್ಯ

ಉತ್ತರ ಪ್ರದೇಶದ ಬಹ್ರೇಚ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಟ್ರೆಚರ್​ ಮೇಲೆ ಮಲಗಿದ್ದ ತಾಯಿಯನ್ನ ಉಳಿಸಿಕೊಳ್ಳಬೇಕು ಅಂತಾ ಇಬ್ಬರು ಪುತ್ರಿಯರು ತಾಯಿಯ ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಲು ಯತ್ನಿಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ನೆಟ್ಟಿಗರು ಆಸ್ಪತ್ರೆಯಲ್ಲಿ ಆಕ್ಸಿಜನ್​ ಅಭಾವ ಹಾಗೂ ಸಿಬ್ಬಂದಿ ಕೊರತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ತುರ್ತು ಸೇವಾ ಅಧಿಕಾರಿ ಅಹ್ತಿಸಮ್​​ ಅಲಿ, ಮೃತ ಮಹಿಳೆಯು ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಆಕೆಗೆ ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಹೇಳಿದ್ರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್​ ಶಂಭು ಕುಮಾರ್​ ಹಾಗೂ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಸ್ಟ್ರೆಚರ್ ಮೇಲೆ ಮಲಗಿದ್ದ ಮಹಿಳೆಯ ಬಳಿ ಧಾವಿಸಿದ್ದರು.

ಮಹಾರಾಜ್​ ಸುಹೇಲ್​ದೇವ್​ ಮೆಡಿಕಲ್​​ ಕಾಲೇಜಿನ ಪ್ರಾಂಶುಪಾಲ ಎ.ಕೆ. ಸಾಹ್ನಿ ಈ ಸಂಬಂಧ ಮಾತನಾಡಿದ್ದು, ಭಾನುವಾರ ಮಹಿಳೆಯನ್ನ ತುರ್ತು ಸೇವೆ ವಿಭಾಗಕ್ಕೆ ಕರೆತರಲಾಗಿತ್ತು. ಆಕೆಯನ್ನ ವೈದ್ಯರು ನೋಡುವ ಮೊದಲೇ ಸಾವನ್ನಪ್ಪಿದ್ದರು. ಮೃತ ಮಹಿಳೆಯ ಶವಕ್ಕೆ ಆಕೆಯ ಮಕ್ಕಳು ಉಸಿರು ನೀಡುವ ಯತ್ನ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...