alex Certify ಬಡ ಸಹಪಾಠಿಯ ಸಂಕಷ್ಟಕ್ಕೆ ಮರುಗಿದ ಸ್ನೇಹಿತರಿಂದ ಬಂಪರ್ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಸಹಪಾಠಿಯ ಸಂಕಷ್ಟಕ್ಕೆ ಮರುಗಿದ ಸ್ನೇಹಿತರಿಂದ ಬಂಪರ್ ಗಿಫ್ಟ್

Reeling Under Financial Strain in Lockdown, TN Man Gets New House as Diwali  Gift From School Friendsಕೊರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿದ ಮೇಲೆ 44 ವರ್ಷದ ಟ್ರಕ್​ ಚಾಲಕ ಮುತ್ತು ಕುಮಾರ್​ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ರು.

ತಿಂಗಳಿಗೆ 15 ಸಾವಿರ ಸಂಪಾದಿಸುತ್ತಿದ್ದ ಮುತ್ತು ಕುಮಾರ್​ ಆದಾಯ ಕೇವಲ 2 ಸಾವಿರ ರೂಪಾಯಿಗೆ ಬಂದಿಳಿದಿತ್ತು. ಇದರಿಂದ ಜೀವನ ನಡೆಸೋದೇ ದೊಡ್ಡ ಕಷ್ಟವಾಗಿ ಪರಿಣಮಿಸಿತು.

ಇದು ಮಾತ್ರವಲ್ಲದೇ ಒಂದೆರಡು ವರ್ಷಗಳ ಹಿಂದೆ ರಾಜ್ಯವನ್ನ ಅಪ್ಪಳಿಸಿದ ಗಜ ಚಂಡಮಾರುತದಿಂದ ಮನೆ ಕೂಡ ಶಿಥಿಲಾವಸ್ಥೆಗೆ ತಲುಪಿಸಿತ್ತು.

ಆದರೆ ಕೆಲ ತಿಂಗಳ ಹಿಂದೆ ಮುತ್ತುಕುಮಾರ್ ತಮ್ಮ ಶಾಲಾ ದಿನಗಳ ಸ್ನೇಹಿತ ನಾಗೇಂದ್ರನ್​ ಎಂಬವರನ್ನ ಭೇಟಿಯಾಗಿ ಕಷ್ಟವನ್ನ ಹೇಳಿಕೊಂಡಿದ್ರು.

ಸ್ನೇಹಿತನ ಈ ಕಷ್ಟ ಕಂಡು ಮರುಗಿದ ನಾಗೇಂದ್ರನ್​ ಸೋಶಿಯಲ್​ ಮೀಡಿಯಾ ಸಹಾಯದಿಂದ ತಮ್ಮ ಸಹಪಾಠಿಗಳನ್ನ ಭೇಟಿಯಾಗಿ ಮುತ್ತುಕುಮಾರ್​ ಕಷ್ಟವನ್ನ ಹೇಳಿದ್ರು. ಕೂಡಲೇ ಸ್ನೇಹಿತರೆಲ್ಲ ಒಂದಾಗಿ ಮುತ್ತುಕುಮಾರ್ ಗೆ ಸುಂದರವಾದ ಮನೆಯನ್ನ ದೀಪಾವಳಿ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...