alex Certify ಸಿನಿಮಾದಿಂದ ಸ್ಪೂರ್ತಿ ಪಡೆದು ವ್ಯಾಪಾರಿಗೆ ಮಕ್ಮಲ್​ ಟೋಪಿ ಹಾಕಿದ ಐನಾತಿ ಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾದಿಂದ ಸ್ಪೂರ್ತಿ ಪಡೆದು ವ್ಯಾಪಾರಿಗೆ ಮಕ್ಮಲ್​ ಟೋಪಿ ಹಾಕಿದ ಐನಾತಿ ಜೋಡಿ..!

ಬಾಲಿವುಡ್​ನ ಪ್ರಖ್ಯಾತ ಸಿನಿಮಾ ʼಬಂಟಿ ಔರ್​ ಬಬ್ಲಿʼಯ ಕತೆ ನಿಮಗೆ ನೆನಪಿದೆಯೇ..? 2005ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಹಾಗೂ ಅಭಿಷೇಕ್​ ಬಚ್ಚನ್​​ ಜೋಡಿಯಾಗಿ ನಟಿಸಿದ್ದರು.

ಇದರಲ್ಲಿ ಅಭಿಷೇಕ್​ ಹಾಗೂ ರಾಣಿ ಇಬ್ಬರೂ ಕಳ್ಳತನ ಮಾಡುವ ಜೋಡಿಯಾಗಿದ್ದರೆ ಅಮಿತಾಬ್​ ಬಚ್ಚನ್​ ಪೊಲೀಸ್​ ಪಾತ್ರದಲ್ಲಿ ಮಿಂಚಿದ್ದರು. ಇದೇ ಸಿನಿಮಾದಿಂದ ಪ್ರೇರಣೆ ಪಡೆದು ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನಾಭರಣವನ್ನ ನೀಡಿ 4 ಲಕ್ಷ ರೂಪಾಯಿ ಪೀಕಲಾಗಿದೆ.

ಗುಜರಾತ್​ನ ವಾಪಿ ಎಂಬಲ್ಲಿ ಪೂರ್ವಜರ ಆಸ್ತಿಯನ್ನ ಉತ್ಖನನ ಮಾಡುವ ವೇಳೆ ಈ ನೆಕ್​ಲೇಸ್​ ಪತ್ತೆಯಾಗಿದೆ ಎಂದು ವ್ಯಾಪಾರಿಯನ್ನ ನಂಬಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಇರುವ ಕಾರಣ ಈ ನೆಕ್​ಲೇಸ್​ನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದ ಜೋಡಿ ವ್ಯಾಪಾರಿ ಬಳಿ 4 ಲಕ್ಷ ರೂಪಾಯಿಯನ್ನ ದೋಚಿದೆ.

ವ್ಯಾಪಾರಿಯ ವಿಶ್ವಾಸವನ್ನ ಗಳಿಸುವ ಸಲುವಾಗಿ ಮೊದಲು ಎರಡು ಚಿನ್ನದ ಮಣಿಯನ್ನ ತೋರಿಸಿದ್ದಾರೆ. ಇದು ನಿಜವಾದ ಚಿನ್ನದ ಮಣಿಯಾಗಿದ್ದರಿಂದ ಸಂಪೂರ್ಣ ಸರ ಚಿನ್ನದ್ದೇ ಆಗಿರಲಿದೆ ಎಂದು ನಂಬಿದ ವ್ಯಾಪಾರಿ ಈ ನಕಲಿ ಸರವನ್ನ ಖರೀದಿ ಮಾಡಿದ್ದ.

ಆದರೆ ಬಳಿಕ ತಾನು ಮೋಸ ಹೋಗಿರುವ ವಿಚಾರ ವ್ಯಾಪಾರಿಯ ಗಮನಕ್ಕೆ ಬಂದಿದ್ದು ವ್ಯಾಗಲ್​ ಎಸ್ಟೇಟ್​ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...