alex Certify ಎರಡು ತಲೆವುಳ್ಳ ಅಪರೂಪದ ಮಂಡಲ ಹಾವಿನ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಲೆವುಳ್ಳ ಅಪರೂಪದ ಮಂಡಲ ಹಾವಿನ ರಕ್ಷಣೆ

ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಮಹಾರಾಷ್ಟ್ರದಲ್ಲಿ ರಕ್ಷಿಸಲಾಗಿದೆ. ಈ ಹಾವು 11 ಸೆಂಮೀ ಉದ್ದವಿದ್ದು, ತಲಾ 2 ಸೆಂಮೀ ಇರುವ ಎರಡು ತಲೆಗಳನ್ನು ಹೊಂದಿದೆ.

ಕೊಳಕು ಮಂಡಲವು ಭಾರತದಲ್ಲಿ ಇರುವ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ. ಇಲ್ಲಿನ ಕಲ್ಯಾಣ್‌ ನಿವಾಸಿಯೊಬ್ಬರು, ಈ ಹಾವನ್ನು ತಮ್ಮ ಮನೆಯ ಅಂಗಳದಲ್ಲಿ ನೋಡುತ್ತಲೇ ಹಾವು ಹಿಡಿಯುವವರನ್ನು ಅಲರ್ಟ್ ಮಾಡಿದ್ದಾರೆ. ಈ ಹಾವನ್ನು ಇಲ್ಲಿನ ಪರೇಲ್‌ನಲ್ಲಿರುವ ಹಫ್‌ಕೈನ್‌ ಸಂಸ್ಥೆಗೆ ನೀಡಲಾಗಿದೆ.

ಅಸಹಜವಾದ ವಂಶವಾಹಿಗಳ ಕಾರಣ ಎರಡು ತಲೆಯ ಹಾವುಗಳು ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ ಇವೆ ಎಂದು ಫೋಟೋ ಪೋಸ್ಟ್ ಮಾಡಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...