alex Certify ಹೈಹೀಲ್ಡ್ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ರಣವೀರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಹೀಲ್ಡ್ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ರಣವೀರ್

ಬಾಲಿವುಡ್​ ನಟ ರಣವೀರ್​ ಸಿಂಗ್​​ ತಮ್ಮ ವಿಭಿನ್ನ ಉಡುಗೆ ಶೈಲಿಯ ಮೂಲಕವೇ ಸದಾ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಇದೀಗ ​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಆಗುತ್ತಿರುವ ರಣವೀರ್​ರ ಫೋಟೋವೊಂದರಲ್ಲಿ ಅವರು ಹೀಲ್ಡ್​ ಶೂಸ್​ ಧರಿಸಿದ್ದು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಈಗಲೂ ಒಳ್ಳೆಯ ಸ್ಥಾನಮಾನಗಳಿಲ್ಲ. ಈಗಲೂ ಅವರನ್ನ ಸಮಾಜ ಬೇರೊಂದು ದೃಷ್ಟಿಯಲ್ಲೇ ನೋಡುತ್ತಿದೆ. ಈ ಮಾತಿಗೆ ಸಾಕ್ಷಿಯೆಂಬಂತೆ ರಣವೀರ್​ ಹೀಲ್ಡ್ ಧರಿಸಿದ ಫೋಟೋವನ್ನ ಶೇರ್​ ಮಾಡುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್​ ಬಾಕ್ಸಿನಲ್ಲಿ ವ್ಯಂಗ್ಯದ ಸುರಿಮಳೆಯನ್ನೇ ಹರಿಸಿದ್ರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಈ ಫೋಟೋಗಳನ್ನ ಟ್ರೋಲ್​ ಮಾಡಲಾಗಿದೆ.

ಟ್ವಿಟರ್​ನಲ್ಲಿ ಅರ್ಧ ಫೋಟೊವನ್ನ ಮಾತ್ರ ಶೇರ್​ ಮಾಡಿ ಈ ಸೆಲೆಬ್ರಿಟಿ ಯಾರೆಂದು ಊಹಿಸಿ ಎಂದು ಹೇಳಲಾಗಿತ್ತು. ಹೈ ಹೀಲ್ಡ್​ನ್ನು ಕಂಡ ಅನೇಕರು ಇದು ಸೋನಾಕ್ಷಿ ಸಿನ್ಹಾ, ಪ್ರಿಯಾಂಕಾ ಚೋಪ್ರಾ, ಶ್ರದ್ಧಾ ಕಪೂರ್​ ಎಂದೆಲ್ಲ ಗೆಸ್​ ಮಾಡಿದ್ದರು. ಆದರೆ ಇದಾದ ಬಳಿಕ ನೆಟ್ಟಿಗರೊಬ್ಬರು ರಣವೀರ್​ರ ಈ ಪೂರ್ತಿ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಬಳಿಕ ಸಖತ್​ ಟ್ರೋಲ್​ ಆಗಿದೆ.

— Dr. Gill 2.0 (@ikpsgill1) April 14, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...