alex Certify ಪ್ರೀತಿಸಿ ಕೈಕೊಟ್ಟಿದ್ದಾರೆಂದು ಬ್ರಿಟನ್​ ರಾಜಕುಮಾರ ಹ್ಯಾರಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಭಾರತೀಯ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಕೈಕೊಟ್ಟಿದ್ದಾರೆಂದು ಬ್ರಿಟನ್​ ರಾಜಕುಮಾರ ಹ್ಯಾರಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಭಾರತೀಯ ಮಹಿಳೆ

ರಾಜಕುಮಾರನನ್ನ ಮದುವೆಯಾಗೋ ಕನಸು ಪ್ರತಿಯೊಬ್ಬ ಯುವತಿಯರಿಗೂ ಇರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ರಾಜಕುಮಾರ ತನ್ನ ಮಾತನ್ನ ಉಳಿಸಿಕೊಂಡಿಲ್ಲ ಅಂತಾ ನೇರವಾಗಿ ಕೋರ್ಟ್​ ಮೆಟ್ಟಿಲನ್ನೇ ಏರಿದ್ದಾಳೆ. ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ನಲ್ಲಿ ಇಂತಹದ್ದೊಂದು ವಿಚಿತ್ರ ಅರ್ಜಿ ಸಲ್ಲಿಕೆಯಾಗಿದೆ.

ಬ್ರಿಟನ್​​ ಪ್ರಿನ್ಸ್​ ಹ್ಯಾರಿ ಮದುವೆಯಾಗೋದಾಗಿ ಕೊಟ್ಟಿದ್ದ ಮಾತನ್ನ ಉಳಿಸಿಕೊಂಡಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಅರ್ಜಿಯನ್ನ ಸಲ್ಲಿಸಿದ್ದಾರೆ. ಪಂಜಾಬ್​ ಹೈಕೋರ್ಟ್ ಈ ಅರ್ಜಿಯನ್ನ ವಜಾ ಮಾಡಿದೆ. ಇದೊಂದು ಹಗಲುಗನಸು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು ಈ ವಿಚಾರ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಪಲ್ವಿಂದರ್​ ಸಿಂಗ್​ ಎಂಬ ವಕೀಲೆಯೊಬ್ಬರು ಈ ಅರ್ಜಿಯನ್ನ ಸಲ್ಲಿಸಿದ್ದು ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಿನ್ಸ್ ಹ್ಯಾರಿ ಕಳುಹಿಸಿದ್ದಾರೆ ಎನ್ನಲಾದ ಇಮೇಲ್​ಗಳನ್ನ ಕೋರ್ಟ್​ಗೆ ಪ್ರಸ್ತುತಪಡಿಸಲಾಗಿದೆ. ಇದರಲ್ಲಿ ಅರ್ಜಿದಾರರಿಗೆ ಹ್ಯಾರಿ ಎಂಬ ಹೆಸರಿನಲ್ಲಿ ಮೇಲ್​​ಗಳು ಬಂದಿವೆ.

ಈ ಅರ್ಜಿಯನ್ನ ವಜಾಗೊಳಿಸಿದ ಕೋರ್ಟ್​, ಈ ಆರೋಪದಲ್ಲಿ ಯಾವುದೇ ತಿರುಳಿಲ್ಲ. ಆದರೆ ಈ ಸುಳ್ಳು ಸಂಭಾಷಣೆಯನ್ನ ಇಷ್ಟೊಂದು ಗಂಭೀರವಾಗಿ ಪರಿಗಣಿಸಿದ ಅರ್ಜಿದಾರೆಯ ಬಗ್ಗೆ ಕನಿಕರ ಮೂಡುತ್ತಿದೆ. ಫೇಸ್​ಬುಕ್​ ಹಾಗೂ ಟ್ವಿಟರ್​ನಂತಹ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಈ ರೀತಿ ಸುಳ್ಳು ಐಡಿಯಾಗಳನ್ನ ಕ್ರಿಯೇಟ್​ ಮಾಡೋದು ಇದೇ ಮೊದಲೇನಲ್ಲ. ಬಹುಶಃ ಈ ಪ್ರಿನ್ಸ್​ ಹ್ಯಾರಿ ಪಂಜಾಬ್​​ನ ಯಾವುದೋ ಸೈಬರ್​ ಕೆಫೆಯಲ್ಲಿ ಕುಳಿತುಕೊಂಡಿರಬಹುದು ಎಂದು ಹೇಳಿದೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು. ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...