alex Certify ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ

ಅದೃಷ್ಟ ಒಮ್ಮೆ ಖುಲಾಯಿಸಿತು ಅಂದರೆ ಮುಗೀತು ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಪಂಜಾಬ್​​ನ ರೇಣು ಚೌಹಾಣ್​ ಎಂಬ ಗೃಹಿಣಿ ಬರೋಬ್ಬರಿ 1 ಕೋಟಿ ರೂಪಾಯಿ ಲಾಟರಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಮೃತ್​​ಸರದ ನಿವಾಸಿಯಾದ ರೇಣು, 100 ರೂಪಾಯಿಯನ್ನ ಕೊಟ್ಟು ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಇದರ ಫಲಿತಾಂಶ ಫೆಬ್ರವರಿ 11ರಂದು ಪ್ರಕಟವಾಗಿದ್ದು ರೇಣು ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನ ಗೆದ್ದಿದ್ದಾರೆ.

ಈ ಹಣವನ್ನ ಪಡೆದುಕೊಳ್ಳಲು ರೇಣು ಲಾಟರಿ ಟಿಕೆಟ್​ ಹಾಗೂ ಅಗತ್ಯ ದಾಖಲೆಗಳನ್ನ ರಾಜ್ಯ ಲಾಟರಿ ವಿಭಾಗಕ್ಕೆ ಸಲ್ಲಿಸಿದ್ದಾರೆ.

ಲಾಟರಿ ವಿಜೇತೆ ರೇಣು ಹಣವನ್ನ ಪಡೆದುಕೊಳ್ಳಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅವರ ಖಾತೆಗೆ ಹಣ ಜಮೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರೇಣು ತಮ್ಮ ಅದೃಷ್ಟ ಖುಲಾಯಿಸಿದ ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರೇಣು, ನನ್ನ ಪತಿ ಅಮೃತಸರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಈ ಬಂಪರ್​ ಹಣ ನನ್ನ ಕುಟುಂಬಕ್ಕೆ ತುಂಬಾನೇ ಸಹಾಯಕವಾಗಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...