alex Certify PUBG ಗೀಳಿಗೆ ಮತ್ತೊಬ್ಬ ಬಾಲಕ ಬಲಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ಗೀಳಿಗೆ ಮತ್ತೊಬ್ಬ ಬಾಲಕ ಬಲಿ….!

ಪಬ್ಜಿ ಗೇಮ್ ಗೀಳಿಗೆ ಬಿದ್ದು ಈಗಾಗಲೇ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಕೋಟಾದ ಗಾಂಧಿ ಕಾಲೋನಿಯಲ್ಲಿ ವಾಸವಾಗಿರುವ 14 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೊಬೈಲ್ ಗೆ ಮೂರು ದಿನದ ಹಿಂದೆ ಪಬ್ಜಿ ಗೇಮ್ ಹಾಕಿಕೊಂಡಿದ್ದ. ಆ ಬಳಿಕ ಹಗಲು-ರಾತ್ರಿಯೆನ್ನದೆ ನಿರಂತರವಾಗಿ ಆಟವಾಡಿದ್ದು, ಮಾನಸಿಕವಾಗಿ ಬಳಲಿದ್ದ.

ಶನಿವಾರದಂದು ಬೆಳಗಿನ ಜಾವ 3 ಗಂಟೆಯವರೆಗೆ ಪಬ್ಜಿ ಆಟವಾಡಿದ ಈತ ಬಳಿಕ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಬ್ಜಿ ಗೇಮ್ ಗೀಳಿನ ಕುರಿತು ಪದೇ ಪದೇ ಎಚ್ಚರಿಕೆ ನೀಡಲಾಗುತ್ತಿದ್ದರೂ ಸಹ ಯುವಜನತೆ ಬುದ್ದಿ ಕಲಿಯುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...