alex Certify ಅಪ್ಪ – ಮಗಳ ಹೃದಯಸ್ಪರ್ಶಿ ಸನ್ನಿವೇಶದ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪ – ಮಗಳ ಹೃದಯಸ್ಪರ್ಶಿ ಸನ್ನಿವೇಶದ ಫೋಟೋ ವೈರಲ್

ಸಾಮಾನ್ಯವಾಗಿ ಪ್ರತಿ ತಂದೆಗೂ ತಮ್ಮ ಮಕ್ಕಳು ಹೆಮ್ಮೆ ಪಡುವಂತೆ ಸಾಧನೆ ಮಾಡಿ ಎದುರಿಗೆ ಬಂದು ನಿಲ್ಲುವುದು ವಿಶೇಷ ಸಂದರ್ಭ. ಇಂಥದ್ದೇ ಒಂದು ಘಳಿಗೆಯ ಅಪ್ಪ – ಮಗಳ ಫೋಟೋ ಒಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮಣಿಪುರದ ಇಂಫಾಲಾ ಉಪ‌ ಪೊಲೀಸ್ ವರಿಷ್ಠಾಧಿಕಾರಿಯಾದ ರತನಾ ನಾಗಸೆಪ್ಪಮ್ ಸಮವಸ್ತ್ರದಲ್ಲಿದ್ದಾಗ ಆಕೆಯ ತಂದೆ ಮಗಳ ಸಮವಸ್ತ್ರದ ಮೇಲಿನ ಸ್ಟಾರ್ ಗಳನ್ನು ನೋಡುವ ಸಂದರ್ಭ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಜಾಲತಾಣದಲ್ಲಿ ಈ ಫೋಟೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹೆಮ್ಮೆಯ ಕ್ಷಣ ಇದು ಶತಕೋಟಿ ಜನರಿಗೆ ಸ್ಫೂರ್ತಿ……ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ತಂದೆಯ ಹೆಮ್ಮೆ ಮತ್ತು ಮಗಳ ಗೌರವ ಸೆರೆಯಾದ ಕ್ಷಣ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...