alex Certify ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ: 51 ಶೈಕ್ಷಣಿಕ ಚಾನೆಲ್‌ ಗಳ ಆರಂಭಕ್ಕೆ ಡಿಡಿ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ: 51 ಶೈಕ್ಷಣಿಕ ಚಾನೆಲ್‌ ಗಳ ಆರಂಭಕ್ಕೆ ಡಿಡಿ ಸಿದ್ದತೆ

ಪ್ರಸಾರ ಭಾರತಿ ಹಾಗೂ ಭಾಸ್ಕರಾಚಾರ್ಯ ರಾಷ್ಟ್ರೀಯ ಬಾಹ್ಯಾಕಾಶ ಹಾಗೂ ಭೂ ವಿಜ್ಞಾನ ವಿಶ್ವ ವಿದ್ಯಾಲಯ, ಎಲೆಕ್ಟ್ರಾನಿಕ್ಸ್ & ತಂತ್ರಜ್ಞಾನ ಸಚಿವಾಲಯ 51 ಶಿಕ್ಷಣ ಟಿವಿ ಚಾನೆಲ್​​ಗಳನ್ನ ಪ್ರಸಾರ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ. ಡಿಡಿ ಕೋ ಬ್ರ್ಯಾಂಡ್​ ಚಾನೆಲ್​ಗಳಾಗಿ ವೀಕ್ಷಕರಿಗೆ ಲಭ್ಯವಾಗಲಿವೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನ ಒಳಗೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಈ ಶೈಕ್ಷಣಿಕ ಚಾನೆಲ್​ಗಳನ್ನ ಪ್ರಸಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸೇವೆಯು ಎಲ್ಲಾ ವೀಕ್ಷಕರಿಗೆ ಉಚಿತವಾಗಿ ಲಭ್ಯವಿರಲಿದೆ .

ಟ್ವಿಟರ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಪ್ರಸಾರ ಭಾರತಿ, ಇಂದು ಭಾಸ್ಕರಾಚಾರ್ಯ ಇನ್ಸಿಟಿಟ್ಯೂಟ್​, ಐಟಿ ಸಚಿವಾಲಯದ ಜೊತೆ 51 ಡಿಟಿಹೆಚ್​ ಶಿಕ್ಷಣ ಟಿವಿ ಚಾನೆಲ್​ಗಳ ಪ್ರಸಾರದ ಒಪ್ಪಂದಕ್ಕೆ ಸಹಿ ಹಾಕಿದೆ. ಡಿಡಿ ಸಹ ಬ್ರ್ಯಾಂಡ್​ಗಳಾಗಿ ಈ ಚಾನೆಲ್​ಗಳು ವೀಕ್ಷಕರಿಗೆ ಲಭ್ಯವಾಗಲಿದೆ ಅಂತಾ ಬರೆದುಕೊಂಡಿದೆ.
ಗ್ರಾಮೀಣ ಹಾಗೂ ದೂರದ ಪ್ರದೇಶಗಳ ಮನೆ ಮನೆಗೂ 24×7 ಗುಣಮಟ್ಟದ ಶಿಕ್ಷಣ ಲಭ್ಯವಿರಲಿದೆ. ಹಾಗೂ ಈ ಎಲ್ಲ ಚಾನೆಲ್​ಗಳು ಉಚಿತವಾಗಿಯೇ ಪ್ರಸಾರವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...